ರಾಖಿಯು ರಕ್ಷಣೆ ನೀಡುವ ಸಂಕೇತವಾಗಿದೆ: ಬಾದಾಮಿ

ಸೈದಾಪುರ:ಸೆ.1:ರಕ್ಷಾಬಂಧನವು ಪರಸ್ಪರ ಪ್ರೇಮ, ಸೌಹಾರ್ದ ಸಹೋದರತೆ ಮತ್ತು ರಕ್ಷಣೆಯ ನೀಡುವ ಪವಿತ್ರ ಬಂಧನವಾಗಿದೆ ಎಂದು ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ನಿರ್ದೇಶಕ ರಾಘವೇಂದ್ರ ಬಾದಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಿದ ರಕ್ಷಾ ಬಂಧನ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಕ್ಷಾ ಬಂಧನ ಹಬ್ಬವು ಅಣ್ಣ ತಂಗಿಯರ ಭಾಂದವ್ಯದ ದೂತಕವಾಗಿದೆ. ಸಹೋದರಿಯ ಪ್ರೇಮ ಮತ್ತು ಸೂಕ್ಷ್ಮ ಭಾವನೆಗಳ ಸಂಕೇತದಂತೆ ಕೈಗೆ ಕಟ್ಟಲಾಗುವ ದಾರವೇ ರಾಖಿ. ಸಾಂಪ್ರದಾಯಿಕ ಹಿನ್ನಲೆಯನ್ನು ಹೊಂದಿರುವ ಈ ಹಬ್ಬವನ್ನು ನಾವು ಅಣ್ಣ ತಮ್ಮ ಅಕ್ಕ ತಂಗಿಯರ ಸಂಬಂಧವನ್ನು ರಕ್ಷಿಸಿಕೊಂಡು ಒಬ್ಬರು ಇನ್ನೊಬ್ಬರ ಕಷ್ಟಕಾಲದಲ್ಲಿ ನಿಂತು ಸಹಾಯ ಸಹಕಾರದಿಂದ ಇದನ್ನು ಗಟ್ಟಿಗೊಳಿಸುವುದಾಗಿದೆ ಎಂದು ಹೇಳಿದರು.
ಬಾಲಕಿಯರು ಬಾಲಕರಿಗೆ ಹಣೆಗೆ ತಿಲಕವಿಟ್ಟು, ಬಲಗೈಗೆ ರಾಖಿ ಕಟ್ಟಿ, ಜೀವನ ಪ್ರತಿ ಕ್ಷಣಗಳು ಯಶ್ವಸಿ ಸಿಗಲೆಂದು ಆರತಿ ಬೆಳಗಿದರು. ನಂತರ ಸಿಹಿ ತಿನಿಸಿದರು. ಇದಕ್ಕೆ ಪ್ರತಿಯಾಗಿ ಬಾಲಕರು ಬಾಲಕಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಉಡುಗೊರೆ ನೀಡಿದರು.
ಈ ವೇಳೆ ಮುಖ್ಯಗುರು ಬಿ.ಬಿ.ವಡವಟ್, ರಾಧ ಸಂಗೋಳಿಗಿ, ಕಾಸಿಂಬಿ ಐ ಕೋನಂಪಲ್ಲಿ, ಶೃತಿ ಗುಮಡಾಲ, ಸಂತೋಷ ದೇಸಾಯಿ, ಕಾಶಿನಾಥ ಮಡಿವಾಳ, ಸುನೀತಾ ತಾರೇಶ, ಮಹೇಶ ಬಾಗ್ಲಿ, ದೇವೇಂದ್ರ ಕುಮಾರ ಮುನಗಲ್, ಚಂದ್ರಕಲಾ ಎಸ್, ಕಶ್ಫಿ ಅಲಾಂ ಸೇರಿದಂತೆ ವಿದ್ಯಾರ್ಥಿಗಳಿದ್ದರು.