ರಾಕೇಶ ಹತ್ಯೆ ಖಂಡಿಸಿ ಬೀದರ್ ನಲ್ಲಿ ಬೃಹತ್ ಪ್ರತಿಭಟನೆ

ಬೀದರ್:ಮೇ.1: ಇತ್ತಿಚೀಗೆ ಯಾದಗಿರಿ ಜಿಲ್ಲೆಯ ಹಿರೆ ಅಗಸಿ ಗ್ರಾಮದಲ್ಲಿ ಹಿಂದು ದಲಿತ ಯುವಕ ರಾಕೇಶನಿಗೆ ಜಾತಿ ನಿಂದನೆ ಮಾಡಿ ಅವರ ತಂದೆ ತಾಯಿಯ ಮುಂದೆನೇ ಮುಸ್ಲಿಮ್ ಯುವಕರ ಗುಂಪೊಂದು ಕೊಲೆಗೈದ ದಾರೂಣ ಘಟನೆ ನಡೆದಿದ್ದು, ತಪ್ಪಿತಸ್ತರಿಗೆ ಗಲ್ಲುಶಿಕ್ಷೆ ನೀಡುವಂತೆ ಬೀದರ್ ಜಿಲ್ಲಾ ಸಕಲ ಸಮಾಜಗಳ ಸಮನ್ವಯ ಸಮಿತಿ ಆಗ್ರಹಿಸಿದೆ.
ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಸಮಿತಿಯ ಮುಖಂಡರು ಡಿ.ಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿದಿದೆ. ನೇಹಾ ಕೊಲೆ ನಡೆದ ಕೆಲವೇ ದಿನಗಳಲ್ಲಿ ಇಂತಹ ಭಯಾನಕ ಘಟನೆ ನಡೆಯುತ್ತಿದ್ದು, ಕಾಂಗ್ರೆಸ್ ಸರ್ಕಾರ ತುಷ್ಟಿ ರಾಜಕೀಯಕ್ಕೆ ಇಳಿದಿದೆ. ಒಂದು ಕೋಮಿನವರಿಗೆ ಕುಮ್ಮಕ್ಕು ನೀಡಿ ಬಹು ಸಮುದಾಯಗಳನ್ನು ಚೆನ್ನಾಗಿ ತುಳಿಯುವ ಹುನ್ನಾರ ನಡೆಯುತ್ತಿದೆ. ಹಿಂದು ಯುವಕ, ಯುವತಿಯರುಇ ಭಯ ಭೀತರಾಗಿ ಓಡಾಡುವಂಥ ವಾತಾವರಣ ಈ ರಾಜ್ಯದಲ್ಲಿ ತಲೆದೂರಿದೆ. ಇಂಥ ಕೊಲೆಗಡುಕ ಸರ್ಕಾರಕ್ಕೆ ಕಿವಿ ಹಿಂಡಿ ಕೊಲೆ ಮಾಡಿದ ಫಯಾಜ್, ಆಸಿಫ್ ಸೇರಿದಂತೆ ಆರೇಳು ಗುಂಡಾಗಳು ಸೇರಿ ರಾಕೇಶನಿಗೆ ಕೊಲೆ ಮಾಡಿದವರಿಗೆ ನೇಣುಗಂಬಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಕಲ ಸಮಾಜಗಳ ಸಮನ್ವಯ ಸಮಿತಿ ಮುಖಂಡರಾದ ಬಾಬುರಾವ ಮಲ್ಕಾಪುರೆ, ಎಸ್.ಎಮ್ ಪಾಟೀಲ, ಬಿ.ಜಿ ಶಟಕಾರ, ರಾಜಕುಮಾರ ಪೋಳ್, ಪ್ರಶಾಂತ ವಿಶ್ವಕರ್ಮಾ, ಎಸ್.ಬಿ ಸಜ್ಜನಶೆಟ್ಟಿ, ಪೀರಪ್ಪ ಔರಾದೆ, ನಾಗೇಶ ಚಿನ್ನಾರೆಡ್ಡಿ, ಸಂಜುಕುಮಾರ ಪಾಟೀಲ, ಡಾ.ವಿರೇಂದ್ರ ಶಾಸ್ತ್ರಿ, ಸತೀಶಕುಮಾರ ನೌಬಾದೆ, ಶಾಮರಾವ ಮಲ್ಕಾಪುರೆ, ವಿಶಾಲ ಅತಿವಾಳೆ, ರಾಹುಲ, ಶರಣಯ್ಯ, ಬಸವರಾಜ ಚಿಕ್ಲೆ, ಸಂಜಯಕುಮಾರ ಘನಾಟೆ, ಮಹೇಶ ಮಡಿವಾಳ, ಬಾಬು, ಯೋಗೇಶ ಪಾಟೀಲ, ಕಂಟೆಪ್ಪ, ಸತೀಶ ಪಾಂಚಾಳ, ರತಿಕಾಂತ ಮೇತ್ರೆ, ತುಕಾರಾಮ, ಡಿಗಂಬರರಾವ ಮಾನಕಾರಿ, ವೆಂಕಟೇಶರಾವ ಮೈಂದೆ, ಸಿದ್ರಾಮಯ್ಯ ಸ್ವಾಮಿ, ಬಸವರಾಜ ಪವಾರ, ಶಶಿಧರ ಹೊಸಳ್ಳಿ, ರೋಶನ್ ವರ್ಮಾ, ಜಾಧವ ಪಟೇಲ್, ಗೋವಿಂದ ಪಟೇಲ್, ರಾಜಕುಮಾರ, ಗುಂಡಪ್ಪ, ಶಿವಕುಮಾರ ಸುಲ್ತಾನಪುರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.