ರಾಕೇಶ್ ರೋಶನ್ – ಪಿಂಕಿ ದಾಂಪತ್ಯ ಬದುಕಿಗೆ ಐವತ್ತು ವರ್ಷ

ಬಾಲಿವುಡ್ ನ ಹಿರಿಯ ನಟ ರಾಕೇಶ್ ರೋಶನ್ ಮತ್ತು ಡೈರೆಕ್ಟರ್ ಜೆ ಓಂ ಪ್ರಕಾಶ್ ಅವರ ಮಗಳು ಪಿಂಕಿ ಅವರ ದಾಂಪತ್ಯ ಬದುಕಿಗೆ ಐವತ್ತರ ಸಂಭ್ರಮ.
ಈ ಶುಭಸಂದರ್ಭದಲ್ಲಿ ಪಿಂಕಿ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ, ಹಾಗೂ ರಾಕೇಶ್ ರೋಶನ್ ಅವರ ವೆಡ್ಡಿಂಗ್ ಅನಿವರ್ಸರಿಗೆ ಶುಭಾಶಯವನ್ನು ಸಲ್ಲಿಸಿದ್ದಾರೆ.


ಈ ವಿಡಿಯೋದಲ್ಲಿ ಇಬ್ಬರ ವಿವಾಹದ ದಿನದಿಂದ ಹಿಡಿದು ಕೆಲವು ಅಪರೂಪದ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಪಿಂಕಿ ಬರೆದಿದ್ದಾರೆ-
“ಐವತ್ತು ವರ್ಷಗಳ ಪಯಣದಲ್ಲಿ ನಾನೂ ಪರ್ಫೆಕ್ಟ್ ಇಲ್ಲ, ನೀವೂ ಪರ್ಫೆಕ್ಟ್ ಇರಲಿಲ್ಲ. ಇದರ ಹೊರತಾಗಿಯೂ ನಾವು ನಮ್ಮ ಸುಂದರ ಬದುಕನ್ನು ಅರ್ಥಪೂರ್ಣವಾಗಿ ಸಾಧಿಸಿದ್ದೇವೆ. ವೈವಾಹಿಕ ಬದುಕಿನ ಐವತ್ತರ ಸಂಭ್ರಮಕ್ಕೆ ನಿಮಗೆ ಧನ್ಯವಾದಗಳು”.
ಹೃತಿಕ್ ರೋಶನ್ ರ ತಂದೆ ರಾಕೇಶ್ ರೋಶನ್ ಮತ್ತು ತಾಯಿ ಪಿಂಕಿ ಅವರದು ಅರೇಂಜ್ಡ್ ಮ್ಯಾರೇಜ್. ಪಿಂಕಿ ಅವರ ತಂದೆ ಡೈರೆಕ್ಟರ್ ಜೆ ಓಂ ಪ್ರಕಾಶ್ ಅವರು ತಮ್ಮ ಮಗಳ ಜೊತೆ ಆಗಾಗ ರೋಶನ್ ಫ್ಯಾಮಿಲಿಯ ಮನೆಗೆ ಬರುತ್ತಿದ್ದರು. ರಾಕೇಶ್ ರೋಶನ್ ೧೯೬೭ ರಲ್ಲಿ ತನ್ನ ತಂದೆಯವರ ನಿಧನದ ನಂತರ ಸಹಾಯಕ ನಿರ್ದೇಶಕರ ರೂಪದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಪಿಂಕಿಯ ಪರಿವಾರದವರು ಆಕೆಗೆ ವಿವಾಹ ಮಾಡುವ ನಿಮಿತ್ತ ವರನನ್ನು ಹುಡುಕುತ್ತಿದ್ದರು. ಅವರಿಗೆ ರಾಕೇಶ್ ರೋಶನ್ ತಮ್ಮ ಮಗಳಿಗೆ ಉತ್ತಮವಾದ ವರ ಎಂದು ನಂಬಿಕೆ ಬಂತು. ಅನಂತರ ರಾಕೇಶ್ ರೋಶನ್ ೧೯೭೦ ರಲ್ಲಿ ಪಿಂಕಿಯನ್ನು ವಿವಾಹವಾದರು.


ಇವರಿಗೆ ೧೯೭೨ ರಲ್ಲಿ ಮಗಳು ಸುನೈನಾ ಮತ್ತು ೧೯೭೪ ರಲ್ಲಿ ಮಗ ಹೃತಿಕ್ ರೋಶನ್ ಜನಿಸಿದರು.
ರಾಕೇಶ್ ತನ್ನ ಫಿಲ್ಮ್ ಕೆರಿಯರ್ ಆರಂಭದಲ್ಲಿ ೧೯೭೦ ರಲ್ಲಿ ಫಿಲ್ಮ್ ಘರ್ ಘರ್ ಕಿ ಕಹಾನಿ ಯಲ್ಲಿ ಅಭಿನಯಿಸಿದ್ದರು. ನಂತರ ಮನ್ ಮಂದಿರ್ ,ಪರಾಯ ಧನ್, ಆಂಖೋ ಆಂಖೋ ಮೆ, ಖೇಲ್ ಖೇಲ್ ಮೆ, ಖಟ್ಟಾ ಮೀಟಾ, ಖೂಬ್ ಸೂರತ್, ತೀಸ್ ರೀ ಆಂಖ್, ಆಖಿರ್ ಕ್ಯೋಂ, ಭಗವಾನ್ ದಾದಾ …..ಮೊದಲಾದ ಫಿಲ್ಮ್ ಗಳಲ್ಲಿ ಅಭಿನಯಿಸಿದ್ದರು.
ನಟನಾಗಿ ಫಿಲ್ಮ್ ಗಳಲ್ಲಿ ರಾಕೇಶ್ ಅವರಿಗೆ ಅಂತಹ ಯಶಸ್ಸೇನೂ ಸಿಗಲಿಲ್ಲ. ಅವರು ೧೯೮೦ ರಲ್ಲಿ ಪ್ರೊಡಕ್ಷನ್ ಕಂಪನಿ ಆರಂಭಿಸಿದರು. ತಮ್ಮ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಆಫ್ ಕೆ ದಿವಾನೆ ನಿರ್ಮಿಸಿದರು. ಆದರೆ ಅದು ಬಾಕ್ಸಾಫೀಸ್ ನಲ್ಲಿ ಸೂಪರ್ ಫ್ಲಾಪ್ ಆಯ್ತು. ಅನಂತರ ೧೯೮೨ ರಲ್ಲಿ ಫಿಲ್ಮ್ ಕಾಮ್ ಚೋರ್ ನಿರ್ಮಿಸಿದರು. ೧೯೮೭ ರಲ್ಲಿ ಖುದ್ ಗರ್ಜ್ ಫಿಲ್ಮ್ ಮೂಲಕ ನಿರ್ದೇಶಕರಾದರು. ಇದು ಮಾತ್ರ ಸೂಪರ್ ಹಿಟ್ ಆಯಿತು.
ರಾಕೇಶ್ ರೋಶನ್ ರ ನಿರ್ದೇಶನದಲ್ಲಿ ೨೦೦೦ ದಲ್ಲಿ ನಿರ್ಮಿಸಿದ ಫಿಲ್ಮ್ ’ಕಹೋ ನಾ ಪ್ಯಾರ್ ಹೈ’ ಬ್ಲಾಕ್ಬಸ್ಟರ್ ಸಾಬೀತು ಎನಿಸಿತು. ೧೮ ಕೋಟಿ ರೂಪಾಯಿಯ ವೆಚ್ಚದಲ್ಲಿ ನಿರ್ಮಿಸಲಾದ ಈ ಫಿಲ್ಮ್ ವಿಶ್ವಾದ್ಯಂತ ೬೨ ಕೋಟಿ ರೂಪಾಯಿ ಸಂಪಾದಿಸಿತು. ಈ ಫಿಲ್ಮ್ ಗೆ ೯ ಕೆಟಗರಿಯಲ್ಲಿ ಫಿಲ್ಮ್ ಫೇರ್ ಅವಾರ್ಡ್ ಸಿಕ್ಕಿತ್ತು. ಆನಂತರ ಈ ಫಿಲ್ಮ್ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ನಲ್ಲಿಯೂ ದಾಖಲೆಯಾಯಿತು.
೨೦೦೦ ದಲ್ಲಿ ರಾಕೇಶ್ ರೋಶನ್ ಮೇಲೆ ಅಂಡರ್ವರ್ಲ್ಡ್ ಜನರು ಗುಂಡು ಹಾರಿಸಿದ್ದರು. ಅದು ಜನವರಿ ೨೧ ನೇ ತಾರೀಕು. ರಾಕೇಶ್ ರೋಶನ್ ಅವರ ತಿಲಕರೋಡ್ ನಲ್ಲಿರುವ ಆಫೀಸಿನ ಹೊರಗಡೆ ಬಂದು ಇಬ್ಬರು ಶೂಟರ್ ಗಳು ಗುಂಡುಹಾರಿಸಿದರು. ರಾಕೇಶ್ ಅವರ ಭುಜಕ್ಕೆ ಒಂದು ಗುಂಡು ತಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರು.ಹಾಗಾಗಿ ಅವರ ಜೀವ ಅಪಾಯದಿಂದ ಪಾರಾಯಿತು.
ಆದರೆ ಈ ಗುಂಡು ಇವರನ್ನು ಕೊಲ್ಲಲು ಅಲ್ಲ ಹೆದರಿಸಲು ಎಂದು ಅನಂತರ ಹೇಳಲಾಯಿತು. ಅಂದರೆ ಅವರ ಕಹೋನಾ ಪ್ಯಾರ್ ಹೈ ಫಿಲ್ಮ್ ನ ಲಾಭದಲ್ಲಿ ತಮಗೂ ಪಾಲು ನೀಡುವಂತೆ ಆಗ್ರಹಿಸಿ ಅಂಡರ್ ವರ್ಲ್ಡ್ ಜನ ಗುಂಡು ಹಾರಿಸಿದ್ದರು ಎಂದು ಪ್ರಚಾರ ಆಗಿತ್ತು.

’ಲವ್ ರಾತ್ರಿ’ ನಟಿ ವರೀನಾ ಹುಸೈನ್ ಕೂಡ ಸೋಶಿಯಲ್ ಮೀಡಿಯಾದಿಂದ ಹೊರಬಂದರು

ಅಮೀರ್ ಖಾನ್ ರ ನಂತರ ಇದೀಗ ’ಲವ್ ರಾತ್ರಿ’ ಯ ನಟಿ ವರೀನಾ ಹುಸೈನ್ ಕೂಡ ಸೋಶಿಯಲ್ ಮೀಡಿಯಾಕ್ಕೆ ವಿದಾಯ ಹೇಳಿದ್ದಾರೆ.
ವರೀನಾ ಅವರು ಸ್ವತಃ ಒಂದು ಪೋಸ್ಟ್ ಶೇರ್ ಮಾಡುತ್ತಾ ಸೋಶಿಯಲ್ ಮೀಡಿಯಾದಿಂದ ತಾನು ಹೊರ ಹೋಗಿರುವುದನ್ನು ತಿಳಿಸಿದ್ದಾರೆ. ಕಳೆದ ವರ್ಷವೂ ವರೀನಾ ಒಂದು ತಿಂಗಳ ಕಾಲ ಸೋಶಿಯಲ್ ಮೀಡಿಯಾಕ್ಕೆ ವಿದಾಯ ಹೇಳಿದ್ದರು.


ವರೀನಾ ಹುಸೈನ್ ತನ್ನ ಕೊನೆಯ ಪೋಸ್ಟ್ ಶೇರ್ ಮಾಡುತ್ತಾ “ನಾನು ಎಲ್ಲೋ ಓದಿದ್ದೆ- ನಾವು ತೆರಳುವುದನ್ನು ಯಾವಾಗಲೂ ಅನೌನ್ಸ್ ಮಾಡಬಾರದು ಎಂದು. ಯಾಕಂದರೆ ಇದೇನು ಏರ್ಪೋರ್ಟ್ ಅಲ್ಲ. ಆದರೆ ಹೀಗೆ ನಾನು ಮಾಡಿರುವುದು ನನ್ನ ಫ್ಯಾನ್ಸ್ ಗಳಿಗಾಗಿ. ಅವರ ಪ್ರೀತಿಯೇ ನನಗೆ ಸದಾಕಾಲ ಸ್ಟ್ರೆಂಥ್ ಆಗಿರುವುದು” ಎಂದಿದ್ದಾರೆ.


ವರೀನಾ ಹುಸೈನ್ ಮುಂದೆ ಬರೆಯುತ್ತಾರೆ-
“ಇದು ನನ್ನ ಕೊನೆಯ ಸೋಶಿಯಲ್ ಮೀಡಿಯಾ ಪೋಸ್ಟ್. ಆದರೆ ನನ್ನ ಟೀಮ್ ನನ್ನ ಸೋಶಿಯಲ್ ಮೀಡಿಯಾ ಅಕೌಂಟ್ ಹ್ಯಾಂಡ್ಲ್ ಮಾಡುವುದನ್ನು ಜಾರಿ ಇರಿಸುತ್ತಾರೆ. ನಿಮಗೆಲ್ಲಾ ನನ್ನ ಕೆಲಸದ ವಿಷಯವಾಗಿ ಅಪ್ಡೇಟ್ ಸಿಗುತ್ತಾ ಇರುತ್ತದೆ”.
ಈ ಪೋಸ್ಟ್ ನ ಕ್ಯಾಪ್ಶನ್ ನಲ್ಲಿ ಬರೆದಿದ್ದಾರೆ- “ಅಮೀರ್ ಸರ್ ಅವರ ಭಾಷೆಯಲ್ಲಿ ನಾನು ಈ ನಿರ್ಧಾರ ಹರಿಯಬಿಟ್ಟಿದ್ದೇನೆ”.
ಅಮೀರ್ ಖಾನ್ ಅವರು ಒಂದು ತಿಂಗಳ ಮೊದಲು ತನ್ನ ಬರ್ತ್ ಡೇ ಒಂದು ದಿನದ ನಂತರ ಸೋಶಲ್ ಮೀಡಿಯಾಕ್ಕೆ ವಿದಾಯ ಹೇಳಿದ್ದರು.