ರಾಕಿಂಗ್ ಸ್ಟಾರ್ ಹೊಸ ಚಿತ್ರ ಟಾಕ್ಸಿಕ್

ಬೆಂಗಳೂರು,ಡಿ.೮- ಕೆಜಿಫ್ -೨ ಚಿತ್ರದ ಭರ್ಜರಿ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರ ಯಾವುದು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಇಂದು ಅವರ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದು ಅದಕ್ಕೆ ” ಟ್ಯಾಕ್ಸಿಕ್ ” ಎಂದು ಹೆಸರಿಡಲಾಗಿದೆ.
ಟಾಕ್ಸಿಕ್ ಚಿತ್ರದ ಕೆಳಗೆ ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಅಡಿ ಬರವಿದೆ . ಈ ಚಿತ್ರವನ್ನು ಗೀತು ಮೋಹನ್‌ದಾಸ್ ಬರೆದು ನಿರ್ದೇಶಿಸಿದ್ದಾರೆ, ಇದು ಯಶ್ ಅವರ ೧೯ ಚಿತ್ರ. ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹ ನಿರ್ಮಾಣ ಮಾಡಲಿದೆ. ಚಿತ್ರ ೨೦೨೫ ರ ಏಪ್ರಿಲ್ ೧೦ ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಅವರನ್ನು ಈ ಚಿತ್ರದ ಮೂಲಕ ಒಟ್ಟಿಗೆ ನೋಡುವ ಅವಕಾಶ ಒದಗಿ ಬಂದಿದೆ. ನಿರ್ದೇಶಕ ಗೀತು ಮೋಹನ್ ದಾಸ್ ಪ್ರತಿಕ್ರಿಯೆ ನೀಡಿ
ಅದ್ಭುತ ಮತ್ತು ಬೃಹತ್ ಚಿತ್ರಕ್ಕೆ ಜಗತ್ತು ಸಾಕ್ಷಿಯಾಗಲಿದೆ. ಯಾವಾಗಲೂ ನಿರೂಪಣೆಯ ಶೈಲಿ ಪ್ರಯೋಗಿಸಿದ್ದೇನೆ. ಲೈಯರ್ಸ್ ಡೈಸ್ ಮತ್ತು ಮೂಥೋನ್ ಅಂತರಾಷ್ಟ್ರೀಯ ಮಟ್ಟದಲ್ಲಿ ಚೆನ್ನಾಗಿ ಸ್ವೀಕರಿಸಲ್ಪಟ್ಟಿದ್ದರೂ, ದೇಶದಲ್ಲಿ ನನ್ನದೇ ಆದ ಪ್ರೇಕ್ಷಕರನ್ನು ಹುಡುಕಲು ನಾನು ಯಾವಾಗಲೂ ಹಂಬಲಿಸುತ್ತೇನೆ ಎಂದಿದ್ದಾರೆ ಚಿತ್ರ ಎರಡು ವಿರುದ್ಧ ಪ್ರಪಂಚಗಳ ಸಮ್ಮಿಲನವಾಗಿದೆ ಮತ್ತು ಕಥೆ ವಿಭಿನ್ನವಾಗಿದೆ. ತಂಡ ಈ ಮಾಂತ್ರಿಕ ಪ್ರಯಾಣವನ್ನು ಪ್ರಾರಂಭಿಸಲು ನಾನು ಉತ್ಸುಕನಾಗಿದ್ದೇವೆ ಎಂದಿದ್ದಾರೆ. ಚಿತ್ರದ ನಿರ್ಮಾಪಕ ಶ ವೆಂಕಟ್ ಕೆ ನಾರಾಯಣ ಮಾತನಾಡಿ, “ಇಲ್ಲಿಯವರೆಗಿನ ನಮ್ಮ ಮಹತ್ವಾಕಾಂಕ್ಷೆಯ ಯೋಜನೆಗೆ ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ಆರಂಭಿಸುತ್ತಿದ್ದೇವೆ.ಯಶ್ ಮತ್ತು ಗೀತು ಬಲವಾದ ನಿರೂಪಣೆ ಮತ್ತು ಬೃಹತ್ ಮೊತ್ತದಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ ಎಂದಿದ್ದಾರೆ.