ರಾಂಪೂರು ಬಡಾವಣೆ: ಕುಡಿಯುವ ನೀರಿನ ಐಆರ್ ಟ್ಯಾಂಕ್ ನಿರ್ಮಿಸಲು ಮನವಿ

ರಾಯಚೂರು.ಜು.೦೫.ನಗರದ ರಾಂಪುರು ಬಡಾವಣೆಯಲ್ಲಿ ಕುಡಿಯುವ ನೀರಿಗಾಗಿ ೩ ನೇ ಐಆರ್ ಟ್ಯಾಂಕ್ ನಿರ್ಮಿಸಲು ಮಾಜಿ ನಗರ ಸಭೆ ಸದಸ್ಯ ವಿ.ಲಕ್ಷ್ಮಿ ರೆಡ್ಡಿ ಅವರು ನಗರ ಸಭೆ ಅಧ್ಯಕ್ಷ ಈ.ವಿನಯ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ರಾಂಪೂರಿನಲ್ಲಿ ಕುಡಿಯುವ ನೀರಿನ ೨ಐಆರ್ ಟ್ಯಾಂಕ್ ಇರುವುದರಿಂದ ನಮಗೆ ತುಂಗಭದ್ರಾ ನದಿ ನೀರನ್ನು ಕೆನಲ್ ಮೂಲಕ ಗ್ರಾವಿಟಿ ನೀರು ತುಂಬಿಸಲು ಕೇವಲ ೩ ತಿಂಗಳುಗಳ ಅವಧಿಗೆ ಮತ್ತೆ ಅನುಕೂಲವಾಗಿರುತ್ತದೆ.
೩ ನೇ ಎಆರ್ ಟ್ಯಾಂಕ್ ಅನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿ.
ಇತ್ತೀಚಿಗೆ ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವರು ಜಿಲ್ಲೆಯ ಕುಡಿಯುವ ನೀರಿಗಾಗಿ ೧೯೯೮ ಕೋಟಿ ಅನುದಾನವನ್ನು ಕುಡಿಯುವ ನೀರಿಗಾಗಿ ಸಚಿವ ಸಂಪುಟದಲ್ಲಿ ಮಂಜುರಾತಿ ಮಾಡಿಸಿದ್ದು ,
ಇದಕ್ಕೆ ನಬಾರ್ಡ್ ಮೂಲಕ ಹಣ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಅದರಿಂದ ಕೂಡಲೇ ಇದನ್ನು ರಾಂಪೂರಿನಲ್ಲಿ ೩ ನೇ ಎಆರ್ ಟ್ಯಾಂಕ್ ನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲು ಕನಿಷ್ಠ ರೂ .೧೦೦ ಕೋಟಿಗಳ ಅನುದಾನವನ್ನು ಸರ್ಕಾರದಿಂದ ಪಡೆದುಕೊಂಡು ಈ ೩ ನೇ ಎಆರ್ ಟ್ಯಾಂಕನ್ನು ಅಳವಡಿಸಿದರೆ ನಗರಕ್ಕೆ ೨೪ ಗಂಟೆ ನೀರನ್ನು ಒದಗಿಸುಲಾಗುತ್ತದೆ ಎಂದು ತಿಳಿಸಿದ್ದರು.