ರಾಂಪೂರು ಜಲಾಶಯಕ್ಕೆ ಗಣೇಕಲ್‌ನಿಂದ ನೀರು

ರಾಯಚೂರು.ಮೇ.೩೦- ರಾಂಪೂರು ಜಲಾಶಯದಲ್ಲಿ ಇನ್ನೂ ಐದಾರು ದಿನಗಳಿಗೆ ಮಾತ್ರ ಸಾಕಾಗುವ ಕುಡಿವ ನೀರಿನ ಸಂಗ್ರಹವಿದ್ದು, ತಕ್ಷಣವೇ ಗಣೇಕಲ್ ಜಲಾಶಯದಿಂದ ರಾಂಪೂರು ಜಲಾಶಯಕ್ಕೆ ನೀರು ಹರಿಸುವಂತೆ ಸೂಚಿಸುವಂತೆ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಅವರು, ಶಾಸಕ ಡಾ.ಶಿವರಾಜ ಪಾಟೀಲ್ ಅವರಿಗೆ ಮನವಿ ಮಾಡಿದ್ದರಿಂದ ಇಂದು ನೀರು ಹರಿಸಲಾಗಿದೆ.
ರಾಂಪೂರು ಜಲಾಶಯದಲ್ಲಿ ನೀರು ಸಂಗ್ರಹವನ್ನು ಸ್ವತಃ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ, ಅಧ್ಯಕ್ಷ ಈ.ವಿನಯಕುಮಾರ ಅವರು ಪರಿಶೀಲಿಸಿದರು. ಗಣೇಕಲ್ ಜಲಾಶಯದಲ್ಲಿ ಕೇವಲ ೧.೨೦ ಮೀ. ನೀರಿನ ಸಂಗ್ರಹವಿರುವುದರಿಂದ ಕುಡಿವ ನೀರಿಗೆ ಸಮಸ್ಯೆಯಾಗಿತ್ತು. ಶಾಸಕರಿಗೆ ಮನವಿ ಮಾಡಿದ ನಂತರ ಗಣೇಕಲ್ ಜಲಾಶಯದಿಂದ ನೀರು ರಾಂಪೂರು ಜಲಾಶಯಕ್ಕೆ ಬಿಡಲಾಗಿದೆ. ಅಧ್ಯಕ್ಷರ ಜೊತೆಗೆ ನಗರಸಭೆ ಸದಸ್ಯರಾದ ದರೂರು ಬಸವರಾಜ, ತಿಮ್ಮಪ್ಪ ನಾಯಕ, ಹರಿಬಾಬು, ನಗರಸಭೆಯ ಆಯುಕ್ತರಾದ ವೆಂಕಟೇಶ, ಕಿರಿಯ ಅಭಿಯಂತರ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.