ರಾಂಪುರ: ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ

ಹುಮನಾಬಾದ್:ಮಾ.28: ಚಿಟಗುಪ್ಪಾ ತಾಲ್ಲೂಕಿನ ರಾಂಪುರ್ ಗ್ರಾಮದ ಶ್ರೀ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವು ಸಡಗರ ಮತ್ತು ಸಂಭ್ರಮದಿದ ಜರುಗಲಿದೆ.
ದೇವಾಲಯದಲ್ಲಿ ಮಾರ್ಚ 29 ರವೆಗೆ ರಾಮಬಾಣ ಮೆರವಣಿಗೆ ಮತ್ತು ಐನಾಪೂರ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪಂಚಾಕ್ಷರಿ ದೇವರಿಂದ ಸೋಲಾಪುರ ಸಿದ್ದರಾಮೇಶ್ವರ ಮಹಾ ಪುರಾಣ ನಡೆಯಲಿದೆ.
ಮಾರ್ಚ 30 ರಂದು ಬೆಳಗ್ಗೆ 8 ಗಂಟೆಗೆ ಕುಂಭ ಮೆರವಣಿಗೆ ಹಾಗೂ ರುದ್ರಾಭಿಷೇಕ ನಂತರ ಉಚಿತ ಆರೋಗ್ಯ ತಪಾಸಣೆ ಶಿಬಿರ, ಸಾಯಂಕಾಲ 7.30ಕ್ಕೆ ಧರ್ಮಸಭೆ ಜರುಗುವುದು. ರಾತ್ರಿ 10.30 ಗಂಟೆಗೆ ರಾಮಲಿಂಗೇಶ್ವರ ತೊಟ್ಟಿಲು ನಂತರ 11.30ಕ್ಕೆ ಪ್ರಸಿದ್ದ ಸಂಗೀತ ಗಾಯಕ ಬಾಬುರಾವ್ ಕೋಟಗಾ, ರಾಜಕುಮಾರ ತುಮಕೋಟಾ, ಕೃಷ್ಣಾ ಮಳಚಾಪುರ, ಮಡೆಪ್ಪಾ ಐನಾಪುರ, ಈಶ್ವರ ಸಾಸರಗಾಂವ, ಲೋಕನಾಥ ಹಳ್ಳಿಖೇಡ(ಕೆ), ಕು.ಈಶ್ವರಮ್ಮಾ ಐನೋಳಿ, ಇವರಿಂದ ದರ್ಬಾರ್ ಕಾರ್ಯಕ್ರಮ ಜರುಗುವುದು.
ಮಾರ್ಚ 31 ರಂದು ಬೆಳಿಗ್ಗೆ 8 ಗಂಟೆಗೆ ವೈದಿಕರಿಂದ ರುದ್ರಾಭಿಷೇಕ ಪೂಜೆ, ಮದ್ಯಾಹ್ನ 3ಕ್ಕೆ ಸಂಗೀತ ಕಾರ್ಯಕ್ರಮ, ರಾತ್ರಿ 7 ಗಂಟೆಗೆ ಪಲ್ಲಕ್ಕಿ ಮೇರವಣಿಗೆ ಹಾಗೂ ಬೆಳಿಗ್ಗೆ 5.30ಕ್ಕೆ ವೈಭವದ ರಥೋತ್ಸವ ಜರುಗುವುದು.
ಏಪ್ರಿಲ್ 1 ರಂದು ಬೆಳಗ್ಗೆ 6 ಗಂಟೆಗೆ ಪ್ರಸಿದ್ಧ ಜಂಗಿ ಕುಸ್ತಿಗಳು ಜರುಗುವವು. ಈ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಶ್ರೀ ರಾಮಲೀಂಗೇಶ್ವರ ದೇವಾಲಯದ ಸಮಿತಿ ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.