ರಾಂಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣೆ ಅಭಿಯಾನ

ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.7: ಖನಿಜಾಂಶ ಹೊಂದಿರುವ ಸೊಪ್ಪು ತರಕಾರಿ ಜತೆ ಮೊಳಕೆಕಾಳು ಉಪಯೋಗಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ತಾಯಿ ಆರೋಗ್ಯವಾಗಿದ್ದಾಗ ಮಾತ್ರ ಆರೋಗ್ಯವಂತ ಮಗುವಿಗೆ ಜನ್ಮ ನೀಡಲು ಸಾಧ್ಯವೆಂದು ಟಿ.ಬಸವರಾಜ ಹೇಳಿದರು.
ತಾಲ್ಲೂಕಿನ ರಾಂಪುರ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯವತಿಯಿಂದ ಏರ್ಪಡಿಸಲಾದ ಪೋಷಣೆ ಅಭಿಯಾನ ಪೌಷ್ಟಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗರ್ಭಿಣಿಯರಲ್ಲಿನ ರಕ್ತಹೀನತೆ ನಿವಾರಣೆ ಹಾಗೂ ಮಕ್ಕಳಲ್ಲಿ ಶಿಶುಬೆಳವಣಿಗೆ ಕುಂಠಿತ, ತೂಕಕಡಿಮೆ ಅಪಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವವರ ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕತೆ ಹೆಚ್ಚಿಸಲು ಪೋಷಣ ಅಭಿಯಾನ ಜಾರಿಗೆ ತಂದಿದೆ ಎಂದು ಹೇಳಿದರು