ರಾಂಪುರ:ವಿಎಸ್.ಎಸ್.ಬ್ಯಾಂಕ್ ಚುನಾವಣೆ ಬಿರಿಸಿನಿಂದ ಮತದಾನ

ಕೊಟ್ಟೂರು, ನ.5: ತಾಲೂಕಿನ ರಾಂಪುರ ಗ್ರಾಮದಪ್ರತಿಷ್ಠಿತ ವಿಎಸ್.ಎಸ್.ಎನ್. ಬ್ಯಾಂಕ್‌ನ ಮುಂದಿನ ಐದು ವರ್ಷದ ಆಡಳಿತಕ್ಕೆ ಇಂದು ಬಿರುಸಿನ ಮತದಾನ ನಡೆಯಿತು.
ಕಾಂಗ್ರಸ್ ಪಕ್ಷದ ಮುಖಂಡರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದು ಒಮ್ಮತ ಮೂಡದ ಹಿನ್ನಲೆಯಲ್ಲಿ ಎರಡು ಗುಂಪುಗಳಾಗಿ ವ್ಯಕ್ತಿಗತ ಪ್ರತಿಷ್ಠೆಯ ಚುನಾವಣೆಯಾಗಿ ಮಾರ್ಪಟಿದೆ. 726 ಸಾಲಗಾರ ಮತದಾರ ಹಾಗೂ 823 ಸಾಲಗಾರೇತರ ಒಟ್ಟು 1549 ಮತದಾರರು ತಮ್ಮ ಹಕ್ಕು ಚಲಾವಣೆ ಮಾಡುವರು, ಬಿರಿಸಿನಿಂದ ಮತದಾನ ನಡೆದಿದ್ದು ಸಾರ್ವಜನಿಕರಲ್ಲಿ ಪಲಿತಾಂಶದ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಕೆಲವೇ ಗಂಟೆಗಳಲ್ಲಿ ಪಲಿತಾಂಶ ಹೊರ ಬರಲಿದೆ.