ರಸ್ತೆ ಹಾಳು ಮಾಡದೇ ಕಾಮಗಾರಿಗೆ ಸೂಚನೆ

ಬ್ಯಾಡಗಿ,ಜು.22: ಮನೆಮನೆಗೆ ಗಂಗೆ ಯೋಜನೆಯಡಿ ಗ್ರಾಮಗಳಲ್ಲಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಪೈಪ್’ಲೈನ್ ಅಳವಡಿಕೆಗಾಗಿ ರಸ್ತೆಗಳನ್ನು ಹಾಳು ಮಾಡದೇ ಯಂತ್ರದ ಮೂಲಕ ರಸ್ತೆ ಕೊರೆದು ಪೈಪ್’ಲೈನ್ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಇಂಜನೀಯರ್ ಅವರಿಗೆ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಸೂಚಿಸಿದರು.
ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ಗುರುವಾರ ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಮನೆಮನೆಗೆ ಗಂಗೆ ಯೋಜನೆಯಡಿ 1.82ಕೋಟಿ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಅಭಿವೃಧ್ದಿ ಕಾಮಗಾರಿಗಳನ್ನು ನಡೆಸುವಾಗ ಸಾರ್ವಜನಿಕರು ಸಹಕಾರ ನೀಡುವ ಮೂಲಕ ಗುಣಮಟ್ಟದಲ್ಲಿ ಕೆಲಸವನ್ನು ಪಡೆದುಕೊಳ್ಳಬೇಕು. ಈಗಾಗಲೇ ಈ ಯೋಜನೆಯು ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಅನುಷ್ಠಾನಗೊಂಡಿವೆ. ಗ್ರಾಮದ ಪ್ರತಿಯೊಬ್ಬರಿಗೂ 55 ಲೀಟರ್ ಶುದ್ದ ಕುಡಿಯುವ ನೀರನ್ನು ಈ ಯೋಜನೆಯ ಮೂಲಕ ಒದಗಿಸಲಿದ್ದು, ಎಲ್ಲರೂ ಮಿತವಾಗಿ ನೀರನ್ನು ಬಳಸಿಕೊಂಡು ಹೆಚ್ಚು ನೀರು ಪೆÇೀಲಾಗದಂತೆ ಕಾಳಜಿ ವಹಿಸಲು ಮನವಿ ಮಾಡಿದರು.
ಎಇಇ ಸುರೇಶ ಬೇಡರ ಪ್ರಾಸ್ತಾವಿಕವಾಗಿ ಮಾತನಾಡಿ, ಸದರಿ ಯೋಜನೆಯನ್ನು 1.82ಕೋಟಿ ರೂಗಳಿಗೆ ಗುತ್ತಿಗೆ ವಹಿಸಲಾಗಿದ್ದು, ಈ ಯೋಜನೆಯಡಿ 50ಸಾವಿರ ಲೀಟರ್ ಸಾಮರ್ಥ್ಯದ ಹೊಸ ಮೇಲ್ಮಟ್ಟದ ಜಲಾಗಾರ ನಿರ್ಮಾಣ, 3ಜಲಾಗಾರಗಳ ದುರಸ್ತಿ ಕಾಮಗಾರಿ ನಡೆಸಲಾಗುವುದು. ಗ್ರಾಮದ 8 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪೈಪಲೈನ್ ಅಳವಡಿಸಿಕೊಂಡು ಗ್ರಾಮದಲ್ಲಿರುವ 680 ಮನೆಗಳಿಗೂ ನಲ್ಲಿ ಸಂಪರ್ಕದ ಮೂಲಕ ನೀರು ಒದಗಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಗ್ರಾಪಂ ಉಪಾಧ್ಯಕ್ಷ ಹನುಮಂತಪ್ಪ ಸುಂಕಾಪುರ ವಹಿಸಿದ್ದರು. ಈ ಸಂದರ್ಭದಲ್ಲಿ ವೀರಯ್ಯ ಹಿರೇಮಠ. ಶಿವಬಸಪ್ಪ ಕುಳೆನೂರ, ಬಸಪ್ಪ ಗೊರವರ, ತಿರಕಪ್ಪ ಮರಬಸಣ್ಣನವರ, ಪಾರವ್ವ ಅಳಲಗೇರಿ, ರಾಮನಗೌಡ ತಂಗೋಡರ, ಹನುಮಂತಪ್ಪ ಮೋಟೆಬೆನ್ನೂರ, ಇಂಜನೀಯರ ವೈ.ಕೆ.ಮಟಗಾರ. ಪಿಡಿಓ ಪರಶುರಾಮ ಅಗಸನಹಳ್ಳಿ, ಕಾರ್ಯದರ್ಶಿ ಪ್ರಕಾಶ ಹುಣಸಿಕಟ್ಟಿ, ರಾಮಣ್ಣ ಗಾಜೇರ, ಗುತ್ತಿಗೆದಾರ ಹನುಮಂತಪ್ಪ ಹಾದಿಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.