ರಸ್ತೆ ಹಾಗೂ ಬ್ರೀಜ್ ಕಾಮಗಾರಿ ಪರಿಶೀಲನೆ

ವಿಜಯಪುರ ಏ. 19: ನಾಗಠಾಣ, ಮಿಂಚನಾಳ ಮಧ್ಯ 6 ಕಿ. ಮಿ. ರಸ್ತೆ 2 ಬ್ರೀಜ್ ಒಳಗೊಂಡು ಇಗಾಗಲೇ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು 1 ಬ್ರೀಜ್ ಮುಗಿಯುವ ಹಂತದಲ್ಲಿದೆ. ನಾಗಠಾಣ ಹತ್ತಿರದ ಬ್ರೀ???ಗೆ ಕಾಮಗಾರಿ ನಡೆಯುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

     9 ಕೋಟಿ ರೂ ವೆಚ್ಚದಲ್ಲಿ ಮಿಂಚನಾಳ, ನಾಗಠಾಣ, ಅಲಿಯಾಬಾದ್ ಹಾಗೂ ದ್ಯಾಬೇರಿ, ಈ ಭಾಗದ ಮುಖ್ಯ ರಸ್ತೆ ಪೂರ್ಣ ಗೊಂಡಿದ್ದು ಈ ರಸ್ತೆಯ ಮಧ್ಯದಲ್ಲಿ 2  ಬ್ರೀಜ್ ಗಳ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಮಿಂಚನಾಳ, ನಾಗಠಾಣ, ಅಲಿಯಾಬಾದ್ ಹಾಗೂ ದ್ಯಾಬೇರಿ ಈ ಭಾಗದ ಸಾರ್ವಜನಿಕರಿಗೆ ರಸ್ತೆ ಹಾಗೂ ಬ್ರೀಜ್   ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

     ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಬಿ ಪಾಟೀಲ್, ಮುಜುಮದಾರ, ನವೀನ್  ಅರಿಕೇರಿ,   ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.