ರಸ್ತೆ ಸ್ವಾಧೀನ ಕ್ರಮಕ್ಕೆ ದಂಡೋರ ಆಗ್ರಹ

ರಾಯಚೂರು, ನ.೨೧, ತಾಲೂಕಿನ ಚಂದ್ರಬಂಡಾ ಸೀಮಾಂತರದ ಸರ್ವೆ ನಂ. ೩೪೮,೫ ಪುರಾತನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳು ೧೫೦ ರಸ್ತೆಗೆ ಸ್ವಾಧೀನವಾಗಿದ್ದು, ರೈತರು ಜಮೀನುಗಳಿಗೆ ತೆರಳಲು ತೊಂದರೆಯಾಗುತ್ತಿದೆ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲೂಕಿನ ಚಂದ್ರಬಂಡಾ ಹೋಬಳಿಯ ಚಂದ್ರಬಂಡಾ ಮತ್ತು ಅರಸಿಕೇರಾ ಸೀಮಾಂತರದ ಸರ್ವೆ ನಂ. ೩೪೮, ೫ ಪುರಾತನದಿಂದಿರುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳು ೧೫೦ ರಸ್ತೆಗೆ ಸ್ವಾಧೀನವಾಗಿದ್ದು, ರೈತರು ಹೊಲಗಳಿಗೆ ಹೋಗುವ ರಸ್ತೆಯು ಸ್ವಾಧೀನವಾಗಿರುತ್ತದೆ. ಸುಮಾರು ೬೦-೭೦ ಸರ್ವೆ ನಂಬರ್ ಜಮೀನುಗಳಿಗೆ ಬಿತ್ತನೆ ಬೀಜ, ರಸಗೊಬ್ಬರ ಇನ್ನಿತರ ಸರಕುಗಳು ಬೆಳೆದ ಬೆಳೆಯ ಆಹಾರ ಧಾನ್ಯಗಳನ್ನು ತರಲು ಬಹಳ ತೊಂದರೆಯಾಗುತ್ತಿದೆ ಎಂದು ಆಗ್ರಹಿಸಿದರು.
ರಸ್ತೆಯನ್ನು ಸ್ವಾಧೀಪಡಿಸಿಕೊಂಡಿದ್ದರಿಂದ ಇಷ್ಟು ಜನ ರೈತರಿ ಸಂಕಷ್ಟಕ್ಕೀಡಾಗಿದ್ದಾರೆ.
ಜಮೀನನ್ನು ಸರ್ವೆ ಮಾಡಿ ರೈತರಿಗೆ ಅನುಕೂಲವಾಗುವಂತೆ ಹಳೆಯ ರಸ್ತೆಯಲ್ಲಿ ರೈತರು ಒಡನಾಟ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೋವಿಂದ ಈಟೇಕರ್, ನರಸನಗೌಡ, ಕೃಷ್ಣರೆಡ್ಡಿ, ನಾಗಪ್ಪ ಹಾಗೂ ಭೀಮಣ್ಣ ಸೇರಿದಂತೆ ಉಪಸ್ಥಿತರಿದ್ದರು.