ರಸ್ತೆ ಸ್ವಚ್ಛಗೊಳಿಸುವ ಯಂತ್ರ

Bbmp administration gourva guptha looking at the new electric sweeping machine at bbmp head office


ಬೆಂಗಳೂರು, ಡಿ.೧೮- ನಗರದ ಮುಖ್ಯ ರಸ್ತೆ, ಹೊರವರ್ತುಲ ರಸ್ತೆ ಹಾಗೂ ಮೇಲ್ಸೇತುವೆ ಮಾತ್ರವಲ್ಲದೆ, ಸಣ್ಣ ರಸ್ತೆಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ನೂತನವಾಗಿ ಬಂದಿರುವ ಯಾಂತ್ರಿಕ ಕಸ ಗುಡಿಸುವ ಯಂತ್ರಗಳನ್ನು (ಮೆಕಾನಿಕಲ್ ಸ್ವೀಪಿಂಗ್ ಮೆಷಿನ್) ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ವೀಕ್ಷಣೆ ಮಾಡಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಗುತ್ತಿಗೆ ದಾರರೊಬ್ಬರು, ಯಾಂತ್ರಿಕ ಕಸ ಗುಡಿಸುವ ಯಂತ್ರಗಳನ್ನು (ಮೆಕಾನಿಕಲ್ ಸ್ವೀಪಿಂಗ್ ಮೆಷಿನ್) ತಂದಿದ್ದು, ಅದರ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ನಗರವನ್ನು ಸ್ವಚ್ಛವಾಗಿಡಲು ಈಗಾಗಲೇ ಪಾಲಿಕೆ ಯಂತ್ರ ತರಿಸಿದ್ದು, ಪ್ರತಿ ವಾಹನಗಳಿಗೆ ಜಿಪಿಎಸ್ ಸಾಧನ, ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಇನ್ನು ಸಣ್ಣ ಬೀದಿಗಳಲ್ಲಿ ಸ್ವಚ್ಚತಾ ಸಂಬಂಧ ಗುತ್ತಿಗೆದಾರರಿಗೆ ಜವಾಬ್ದಾರಿ ನೀಡಿದ್ದು, ಅವರೇ ಈ ಯಂತ್ರ ತಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.