ರಸ್ತೆ ಸುರಕ್ಷತೆ ಪಾಲಿಸಿ : ಡಿವೈಎಸ್ಪಿ ಎಸ್.ಚೈತ್ರ 

ಸಂಜೆವಾಣಿ ವಾರ್ತೆ

 ಹಿರಿಯೂರು :  ಜು.20-ಪ್ರತಿಯೊಬ್ಬರು ರಸ್ತೆಯಲ್ಲಿ ಚಲಾಯಿಸುವಾಗ ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸಬೇಕು ಎಂದು ಡಿವೈಎಸ್ಪಿ ಎಸ್.ಚೈತ್ರ ಹೇಳಿದರು. ಹಿರಿಯೂರು ಪೊಲೀಸ್ ಉಪ ವಿಭಾಗದ ವತಿಯಿಂದ ನಗರದ  ಗಾಂಧಿ ವೃತದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮೊದಲು ನಾವು ಜಾಗೃತಿ ಮೂಡಿಸುತ್ತಿದ್ದೇವೆ ಇದನ್ನು ಮೀರಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತದೆ ಎಂದರು. ಮನೆ ಹತ್ತಿರವೇ ಇರಲಿ ತೋಟ ಹತ್ತಿರವೇ ಇರಲಿ ವಾಹನಗಳಲ್ಲಿ ಓಡಾಡುವಾಗ ರಸ್ತೆ ನಿಯಮಗಳನ್ನು ಅರಿತು ವಾಹನ ಚಲಾಯಿಸಬೇಕು ಎಂದು ತಿಳಿಸಿದರು.  ದ್ವಿಚಕ್ರ ವಾಹನಗಳಲ್ಲಿ ಮೂರು ಜನ ಕೂರುವುದು, ಹೆಲ್ಮೆಟ್ ಧರಿಸದೆ ಇರುವುದು ಕಾನೂನು ಉಲ್ಲಂಘವಾಗುತ್ತದೆ ಇಂತಹ ಅಜಾಗರೂಕತೆಗೆ ಅವಕಾಶ ನೀಡದೆ ನಿಯಮಗಳನ್ನು ತಪ್ಪದೇ ಪಾಲಿಸಿ ಎಂದು ಎಚ್ಚರಿಸಿದರು.  ಪೌರಯುಕ್ತ ಹೆಚ್. ಮಹಾಂತೇಶ್ ಮಾತನಾಡಿ ಜಾಗೃತಿ ಜಾತ ಸಾಂಕೇತಿಕವಾಗಿ ನಡೆದರು ಪ್ರತಿ ಹೆಜ್ಜೆ ಹೆಜ್ಜೆ ಯಲ್ಲೂ ರಸ್ತೆ ಸುರಕ್ಷತಾ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು  ತಮ್ಮ ವೈಯಕ್ತಿಕ ರಕ್ಷಣೆ ಜೊತೆಗೆ ಪೊಲೀಸ್ ಇಲಾಖೆ ಹಾಗೂ ನಗರಸಭೆಯೊಂದಿಗೆ ಸಹಕರಿಸಬೇಕು ಎಂದರು. ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು.  ಬೈಕ್ ಓಡಿಸುವ ಮುನ್ನ ಹೆಲ್ಮೆಟ್ ಧರಿಸಲು ಮರೆಯದಿರಿ, ಮೊದಲು ಸುರಕ್ಷತೆಯ ಬಗ್ಗೆ ಯೋಚಿಸಿ ನಂತರ ಚಾಲನೆ ಮಾಡಿ, ಅಪಘಾತಗಳು ಮಾನವನ ತಪ್ಪುಗಳು, ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಎಚ್ಚರ ಇರಲಿ ಎಂಬ ನಾಮಫಲಕಗಳನ್ನು ಪ್ರದರ್ಶಿಸಲಾಯಿತು. ಜಾಥಾದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಕಾಳಿಕೃಷ್ಣ, ಪಿಎಸ್ಐ ರವರಾದ  ಬಿ.ಎನ್.ಮಂಜುನಾಥ್, ಲಕ್ಷ್ಮಿ ನಾರಾಯಣ್, ಸಚಿನ್ ಬಿರಾದಾರ್ ಮತ್ತು ಸಿಬ್ಬಂದಿ ವರ್ಗದವರು, ಆರೋಗ್ಯ ನಿರೀಕ್ಷಕರಾದ ಸಂಧ್ಯಾ ಮೀನಾಕ್ಷಿ ಹಾಗೂ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಮತ್ತು ನಗರಸಭೆ ಪೌರಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.