ರಸ್ತೆ ಸುರಕ್ಷತೆ: ಜಾಗೃತಿ ಕಾರ್ಯಕ್ರಮ

ಹುಬ್ಬಳ್ಳಿ, ಫೆ 7: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ-2024ರ ಅಂಗವಾಗಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ, ಹುಬ್ಬಳ್ಳಿ ಇಲ್ಲಿ ಕಾನೂನು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಶ್ರೀಮತಿ ಅನುರಾಧಾ ವಸ್ತ್ರದ ಕೆ.ಎ.ಎಸ್. ಕುಲಸಚಿವರು (ಆಡಳಿತ) ಕರಾಕಾವಿ, ಹುಬ್ಬಳ್ಳಿ ಇವರು ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಭೀಮನಗೌಡ ಪಾಟೀಲ್, ಉಪಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಧಾರವಾಡ (ಪಶ್ಚಿಮ) ಇವರು ಪ್ರತಿ ದಿನ 30 ಜನ ರಸ್ತೆ ಅಪಘಾತದಲ್ಲಿ ಮೃತರಾಗುತ್ತಿರುವುದನ್ನು ತಿಳಿಸಿ, ಅಪಘಾತಗಳನ್ನು ತಡೆಗಟ್ಟಲು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ನಾವೆಲ್ಲರೂ ಪಾಲಿವೇಕೆಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಮಾಡಿಸಿದರು.
ಪಿ.ಆರ್.ದೇಸಾಯಿ, ಹಿರಿಯ ಮೋಟಾರು ವಾಹನ ನಿರೀಕ್ಷಕರು ಇವರು ಕಡ್ಡಾಯವಾಗಿ ಡಿ.ಎಲ್. ಪಡೆದು ವಾಹನ ಚಲಾಯಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಪ್ರೊ. ಡಾ.ಜಿ.ಬಿ. ಪಾಟೀಲ, ಹಣಕಾಸು ಅಧಿಕಾರಿಗಳು (ಪ್ರ) ನಿಕಾಯ ಮುಖ್ಯಸ್ಥರು, ಕರಾಕಾವಿ, ಹುಬ್ಬಳ್ಳಿ ಇವರು ಯುವಶಕ್ತಿಯಿಂದ ರಸ್ತೆ ನಿಯಮಗಳ ಪಾಲನೆಯಾದಲ್ಲಿ ಮಾತ್ರ ಸಾರಿಗೆ ಇಲಾಖೆಯಿಂದ ತಿಳಿಸಿದಂತೆ ಶೇಕಡಾ 10 ರಷ್ಟು ಅಪಘಾತಗಳನ್ನು ನಾವು ಕಡಿಮೆ ಮಾಡಬಹುದೆಂದರು.
ಗೌರವ ಅತಿಥಿ ಸ್ಥಾನವನ್ನು ಪ್ರೊ.ಡಾ. ರತ್ನಾ ಆರ್. ಭರಮಗೌಡರ್, ಕುಲಸಚಿವರು (ಪರೀಕ್ಷಾಂಗ ಪ್ರ) ಮತ್ತು ನಿರ್ದೇಶಕರು, ಕರಾಕಾವಿ, ಕಾನೂನು ಶಾಲೆ, ಹುಬ್ಬಳ್ಳಿ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ವಿನಾಯಕ ನಾಯಕ್, ಮೋವಾನಿ, ಎಂ.ಎಫ್. ಬನಹಟ್ಟಿ, ಅಧೀಕ್ಷಕರು, ಸಚಿನ್ ಹುಲಕೋಟಿ, ಶ್ರೀಮತಿ ಲಕ್ಷ್ಮೀ ಬೂದಣ್ಣವರ ಹಾಗೂ ನಿಂಗಪ್ಪ ಬಿಳ್ಳೂರು ಪಾಲ್ಗೊಂಡಿದ್ದರು.