ರಸ್ತೆ ಸುರಕ್ಷತಾ ಸಪ್ತಾಹ

ನವಲಗುಂದ,ಮೇ30 : ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಕಾನೂನು ನಿಯಮ ಪಾಲಿಸುವುದರೊಂದಿಗೆ ವಾಹನದ ಸುರಕ್ಷತಾ ಕ್ರಮವನ್ನು ಅನುಸರಿಸುವುದರಿಂದ ಹಲವಾರು ಅಪಾಯಗಳಿಂದ ರಕ್ಷಣೆ ಪಡೆಯಬಹುದಾಗಿದೆ ಎಂದು ಪಿಎಸ್‍ಐ ಜನಾರ್ಧನ ಭಟ್ರಳ್ಳಿ ಹೇಳಿದರು.

ಅವರು ಪಟ್ಟಣ ಬಸ್ ಡಿಪೆÇೀದಲ್ಲಿ ಜನಸ್ನೇಹಿ ಪೆÇಲೀಸ್ ಠಾಣೆಯಿಂದ ಹಮ್ಮಿಕೊಂಡ ರಸ್ತೆ ಸುರಕ್ಷಾ ಸಪ್ತಾಹದಲ್ಲಿ ಮಾತನಾಡಿದರು.

ಸಿಪಿಐ ರವಿಕುಮಾರ ಕಪ್ಪತ್ತನವರ ಮಾತನಾಡಿ ವಾಹನ ಚಾಲಕರು ತಮ್ಮ ಹಾಗೂ ಕುಟುಂಬದ ಸುರಕ್ಷತೆಯ ಜೊತೆಗೆ ಇನ್ನೊಬ್ಬರ ಜೀವ ಉಳಿಸಲು ಮುಂದಾಗಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಬಳಕೆ ಮಾಡುವುದು, ವಿಮೆ, ಪರವಾನಗಿ, ವಾಹನಗಳ ಎಫ್‍ಸಿ ಸೇರಿದಂತೆ ನಿಯಮಾನುಸಾರ ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ವಾಹನ ಚಾಲಕರು ಮತ್ತು ಮಾಲೀಕರು ಕೈಗೊಳ್ಳಬೇಕು ಎಂದರು.

ಪಿಎಸ್‍ಐ ಮಹಾಂತೇಶ ಮಿರ್ಜಿ, ಘಟಕ ವ್ಯವಸ್ಥಾಪಕ ಬಸವರಾಜ ಮುಳ್ಳೂರ, ಸಹಾಯಕ ಸಂಚಾರಿ ಅಧಿಕ್ಷಕ ಟಿ.ಎಸ್ ಮುನ್ನಾಸಾಬ , ರಾಜು ಮಾಲಗಿತ್ತಿ, ಎಂ.ಎಸ್.ಕಳಸದ ಸೇರಿಂದತೆ ಚಾಲಕ,ನಿರ್ವಾಹಕರು ಉಪಸ್ಥಿತರಿದ್ದರು.