
ಭಾಲ್ಕಿ: ಆ.3:ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ, ಅಪಘಾತ ಹಾಗು ಪ್ರಾಣಹಾನಿ ತಪ್ಪಿಸಬಹುದು ಎಂದು ಎಎಸ್‍ಪಿ ಪ್ರಥ್ವೀಕ ಶಂಕರ ಹೇಳಿದರು.
ಪಟ್ಟಣದ ಗಾಂಧಿ ವೃತ್ತದಲ್ಲಿ, ಪೊಲೀಸ್ ಉಪವಿಭಾಗ ಭಾಲ್ಕಿ ಹಾಗು ನಗರ ಪೊಲೀಸ್ ಠಾಣೆ ಭಾಲ್ಕಿಯ ವತಿಯಿಂದ ಬುಧವಾರ ರಸ್ತೆ ಅಪಘಾತ ತಡೆ ಮಾಸಾಚರಣೆ ನಿಮಿತ್ಯ ಆಯೋಜಿಸಿದ್ದ ರಸ್ತೆ ಸುರಕ್ಷತಾ ಅಭಿಯಾನ 2023ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳು ಕಡ್ಡಾಯವಾಗಿ ಪಾಲಿಸಬೇಕು. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಬೈಕ್ ಓಡಿಸುವಾಗ ಮೊಬೈಲ್‍ನಲ್ಲಿ ಮಾತನಾಡಬಾರದು. ಕಾರ್ ಮತ್ತು ನಾಲ್ಕುವಾಹದ ಸವಾರರು ಸೀಟ್‍ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು. ಇದನ್ನೆಲ್ಲ ಅನುಸರಿಗೆ ರಸ್ತೆ ನಿಯಮದಂತೆ ಸಂಚರಿಸಿದರೆ ಯಾವುದೇ ಅಪಘಾತ ವಾಗುವುದಿಲ್ಲ. ಇಲ್ಲದಿದ್ದರೇ ನಮ್ಮ ಜೀವನ ಬೇರೆಯವರ ಕೆಗೆ ಕೊಡಬೇಕಾಗುತ್ತದೆ ಎಂದು ಹೇಳಿದರು.
ಸಿಪಿಐ ಜಿ.ಎಸ್.ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಟ್ಟಣದ ಗಣ್ಯರು, ಪತ್ರಕರ್ತರು, ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು. ನಂತರ ಇಡೀದಿನ ರಸ್ತೆ ನಿಯಮ ಪಾಲಿಸದಿದ್ದರೆ ಆಗುವ ಅನಾಹುತಗಳ ವಿಡಿಯೋ ಚಿತ್ರಣ ತೋರಿಸುವ ಮೂಲಕ ಜನರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.