ರಸ್ತೆ ಸುಧಾರಣೆಗೆ ಆಗ್ರಹಿಸಿ ಗ್ರಾಮಸ್ಥರಿಂದ ಮನವಿ

ಇಂಡಿ:ಸೆ.17:ಮಾವಿನಹಳ್ಳಿ ಗ್ರಾಮದ ಜನರು ರಸ್ತೆ ಇಕ್ಕಟ್ಟಿನಿಂದ ಹಾಗೂ ಹದಗೇಟ್ಟ ರಸ್ತೆಯಿಂದ ಹಲವಾರು ಸಮಸ್ಯೆಗಳು ಉಲ್ಬಣಸುತ್ತಿವೆ , ಶಾಲಾ ಮಕ್ಕಳಿಗೆ, ಹಾಗೂ ಮಹಿಳೆಯರ ಹೆರಿಗೆಗೆ ಆಸ್ಪತ್ರೆಗೆ ಸಾಗುವುದು ತೋಂದರೆ ಆಗುತ್ತಿದ್ದು ಕೂಡಲೆ ಸಂಬಂಧಿಸಿದ ಇಲಾಖೆ ಪರೀಶಿಲಿಸಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಾಲೂಕ ಜೆಡಿಎಸ್ ಮುಖಂಡ ಬಿಡಿ ಪಾಟೀಲ ಹೇಳಿದರು. ತಾಲೂಕಿನ ಮಾವಿನಹಳ್ಳಿ ಗ್ರಾಮದ ಇಂಗಳಗಿ ಗ್ರಾಮದಿಂದ ಚಿಕ್ಕಬೇವನೂರ್ ಗ್ರಾಮಕ್ಕೆ ಹೋಗುವ ರಸ್ತೆ ಸುಧಾರಣೆ ಮಾಡಲು ಕಂದಾಯ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡಾದೆ ಅವರಿಗೆ ಮಿನಿ ವಿಧಾನ ಸೌಧದ ಕಾರ್ಯಾಲಯದಲ್ಲಿ ಗ್ರಾಮಸ್ಥರಿಂದ ಮನವಿ ಸಲ್ಲಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಇಂಗಳಗಿ ಗ್ರಾಮ ಪಂಚಾಯತ ಅಧ್ಯಕ್ಷ ಮಲ್ಲಿಕಾರ್ಜುನ ಕುಂಬಾರ, ಉಪಾಧ್ಯಕ್ಷ ಕಲ್ಲಪ ವಾಗಿಣಿ,ಅಜೀತ ಕದಂ,ಸುನೀಲ ದಶವಂತ,ಅಶೋಕ ದಶವಂತ, ಯಲ್ಲಪ್ಪ ಪೂಜಾರಿ, ಮಚೇಂದ್ರ ಕದಂ,ಸಾತಪ್ಪ ತೆನ್ನಹಳ್ಳಿ,ಬಸು ಕೋಳಿ, ವಿಠ್ಠಲ ಕದಂ, ಪಂಡಿತ ಕದಂ,ರವಿ ದಶವಂತ, ಸಿದ್ದು ಬಿರಾದಾರ ಮನೋಹರ ಕದಂ ಸೇರಿದಂತೆ ಜನರು ಉಪಸ್ಥಿತರಿದ್ದರು.