ರಸ್ತೆ ಸರಿಪಡಿಸಿಕೊಂಡ ಗ್ರಾಮಸ್ಥರು

ಸೈದಾಪುರ:ಸೆ.10:ಇಲ್ಲಿಗೆ ಸಮೀಪದ ಕೊಂಡಪೂರ ಹಾಗೂ ಸಂಗವಾರ ಗ್ರಾಮಸ್ಥರು ಸೇರಿಕೊಂಡು ಮುಖ್ಯ ರಸ್ತೆಗೆ ಹೊಂದಿಕೊಂಡು ತಮ್ಮ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಕಿರು ರಸ್ತೆ ಹಾಳಾಗಿದ್ದೂ ಅದನ್ನು ಸರಿಪಡಿಸಿಕೊಂಡರು. ಇತ್ತಿಚಿಗೆ ಸುರಿದ ಭಾರಿ ಮಳೆಯಿಂದ ಮಣ್ಣು ಕೊಚ್ಚಿಕೊಂಡು ರೈತರ ಸಂಚಾರಕ್ಕೆ ತೊಂದರೆಯಾಗಿತ್ತು. ಇದನ್ನು ಪರಿಗಣಿಸಿದ ಗ್ರಾಮಸ್ಥರು ಜೆಸಿಬಿ ಹಾಗೂ ಟ್ರ್ಯಾಕ್ಟರ ಮೂಲಕ ತಾವೇ ಸಂಚಾರಕ್ಕಾಗಿ ಅನುಕೂಲತೆ ಮಾಡಿಕೊಂಡರು. ಅತಿ ಮಳೆಯಿಂದಾಗಿ ಬೆಳಗಳು ಆತಂಕವನ್ನುಂಟು ಮಾಡುವ ಸಂದರ್ಭದಲ್ಲಿ ಸಂಚಾರದ ಸಮಸ್ಯೆ ರೈತರ ಪಾಲಿಗೆ ತೊಂದರೆಯನ್ನುಂಟು ಮಾಡಿದೆ. ಈ ರಸ್ತೆಯ ಮೂಲಕ ಕೃಷಿ ಪರಿಕರಗಳನ್ನು ಸುಲಭವಾಗಿ ಸಾಗಿಸಲು ಅನುಕೂಲವಾಗಿತ್ತು. ರಸ್ತೆ ತೊಂದರೆಯಿಂದಾಗಿ ರೈತರು ತಮ್ಮ ಜಮೀನುಗಳಿಗೆ ತಲುಪಲು ಪರಿತಪಿಸಬೇಕಾದ ಪರಸ್ಥಿತಿ ನಿರ್ಮಾಣವಾಗಿತ್ತು. ಈದೀಗ ತಾತ್ಕಾಲಿಕ ವ್ಯವಸ್ಥೆಯನ್ನು ಎರಡು ಗ್ರಾಮಗಳ ರೈತರು ಮಾಡಿಕೊಂಡಿದ್ದಾರೆ.