ರಸ್ತೆ ಸಂಚಾರ ಸುರಕ್ಷತೆಯ ಕುರಿತು ಜಾಗೃತಿ ಅಭಿಯಾನ

ಚಿಂಚೋಳಿ,ಆ.24- ಪಟ್ಟಣದ ಪೆÇಲೀಸ್ ಪರೇಡ್ ಮೈದಾನದಲ್ಲಿ ಠಾಣೆಯ ಸಿಪಿಐ ಅಂಬರಾಯ ಕಾಮಾನಮನಿ, ಮತ್ತು ಪಿಎಸ್‍ಐ ಹನುಮಂತ್ ಬಕ್ಕಲಗಿ, ಅವರ ನೇತೃತ್ವದಲ್ಲಿ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲಾಯಿತು.
ರಸ್ತೆ ಸುರಕ್ಷತಾ ನಿಯಮಗಳನ್ನು ಆಟೋ ಚಾಲಕರಿಗೆ ಹಾಗೂ ಕ್ರೂಜರ್ ಚಾಲಕರಿಗೆ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಕುರಿತು ಮಾಹಿತಿ ನೀಡಲಾಯಿತು.
ಚಾಲಕರು ಕಡ್ಡಾಯವಾಗಿ ಎಲ್ಲರೂ ತಮ್ಮ ಹತ್ತಿರ ಯಾವುದೇ ವಾಹನ ಹೊಂದಿದ್ದರೂ ಕೂಡ ಮೊದಲಿಗೆ ತಮ್ಮ ಚಾಲನ ಪರವಾನಿಗೆಯ ಲೈಸೆನ್ಸ್ ಮತ್ತು ಗಾಡಿಯ ಇನ್ಸೂರೆನ್ಸ್ ಮಾಡಿಸಿಕೊಳ್ಳಬೇಕು.ಈ ಸಂದರ್ಭದಲ್ಲಿ ಚಿಂಚೋಳಿ ಪೆÇಲೀಸ್ ಸಿಬ್ಬಂದಿಗಳಾದ ಮಲಿರ್ಂಗ್, ನಾಗರಾಜ, ಇದ್ದರು