ರಸ್ತೆ ಸಂಚಾರಿ ಮಾದರಿ ಸಮೀಕ್ಷೆ ಆರಂಭ

ಕಲಬುರಗಿ.ಫೆ.23:ಕಲಬುರಗಿ ಲೋಕೋಪಯೋಗಿ ಇಲಾಖೆಯ ಸಂಪರ್ಕ ಮತ್ತು ಕಟ್ಟಡಗಳು (ಈಶಾನ್ಯ) ಮುಖ್ಯ ಇಂಜಿನಿಯರವರ ಕಚೇರಿಯಿಂದ ಪ್ರಸಕ್ತ 2021ನೇ ಸಾಲಿನಲ್ಲಿ ಇದೇ ಫೆಬ್ರವರಿ 23ರ ಬೆಳಗಿನ 6 ಗಂಟೆಯಿಂದ ಫೆಬ್ರವರಿ 25ರ ಬೆಳಗಿನ 6 ಗಂಟೆಯವರೆಗೆ ಎರಡು ದಿನಗಳ ಕಾಲ ಸತತವಾಗಿ ವಾಹನಗಳ ರಸ್ತೆ ಸಂಚಾರ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಕಲಬುರಗಿ ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡಗಳು (ಈಶಾನ್ಯ) ಮುಖ್ಯ ಇಂಜಿನಿಯರರಾದ ಜಗನ್ನಾಥ ಹಲಿಂಗೆ ಅವರು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಪ್ರಥಮ ಬಾರಿಗೆ ಸಂಪೂರ್ಣ ಸ್ವಯಂ ಚಾಲಿತ ಸಾಧನಗಳನ್ನು ಅಳವಡಿಸಿ ಹಾಗೂ ವಿಡಿಯೋ ಬೇಸ್ಡ್ ಆಟೋಮೇಟೆಡ್ ಕೌಂಟ್ ಪೋಸ್ಟ್ ಯುನಿಟ್‍ (Video Based Automated count post Unit)ಗಳ ಮೂಲಕ ರಸ್ತೆ ಸಂಚಾರ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ.
ಈ ಸಮೀಕ್ಷೆಯು ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಜಗನ್ನಾಥ ಹಲಿಂಗೆ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ಸಿಬ್ಬಂದಿಗಳು ಪರಿವೀಕ್ಷಣೆ ಮಾಡಲಿದ್ದಾರೆ. ಈ ರಸ್ತೆ ಸಂಚಾರ ಸಮೀಕ್ಷೆ ಸಂದರ್ಭದಲ್ಲಿ ಎಲ್ಲಾ ಸಾರ್ವಜನಿಕರು ಹಾಗೂ ವಾಹನ ಚಾಲಕರು ಇದಕ್ಕೆ ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.