ರಸ್ತೆ ವಿಸ್ತರಣೆಗೆ ನೇಪಾಳ ತಕರಾರು

ನವದೆಹಲಿ,ಜ.೧೫- ಉತ್ತರಾಖಂಡದ ಲಿಪುಲೇಕ್ ಸಮೀಪದಲ್ಲಿ ರಸ್ತೆಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ನೇಪಾಳದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಈ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಭಾರತ-ನೇಪಾಳದ ಸಾರ್ವಭೌಮತೆ ಮತ್ತು ಪ್ರಾಂತೀಯ ಏಕತೆಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿವೆ.
ಲಿಪುಲೇಕ್, ಲಿಪಿಯಾದುರ ಮತ್ತು ಕಾಡಾಪಾನೆ ಪ್ರದೇಶದ ಮೂರು ಜಂಕ್ಷನ್‌ಗಳೂ ಸೇರುತ್ತವೆ. ಇಲ್ಲಿ ರಸ್ತೆ ವಿಸ್ತೀರ್ಣಕ್ಕೆ ಕೇಂದ್ರ ಸರ್ಕಾರ ಕಾಮಗಾರಿ ಕೈಗೊಳ್ಳಲು ಮುಂದಾಗಿದೆ.
ಇದರ ನಡುವೆ ಚೀನಾ ಈ ಹಿಂದೆ ತನ್ನ ಭಾಗಗಳನ್ನು ಪ್ರತಿಪಾದಿಸಲು ಹೊಸ ರಾಜಕೀಯ ಭೂಪಟವನ್ನು ನೇಪಾಳಕ್ಕೆ ನೀಡಿ ಈ ಜಾಗ ತಮಗೆ ಸೇರಿದ್ದು ಎಂದು ಸಮರ್ಥನೆ ಮಾಡಿಕೊಳ್ಳಲು ಮುಂದಾಗಿದೆ.
ಕಳೆದ ತಿಂಗಳು ಲಿಪುಲೇಕ್ ರಸ್ತೆಯನ್ನು ವಿಸ್ತರಿಸುವುದಾಗಿ ಪ್ರಧಾನಮಂತ್ರಿ ನರೇಂದ್ರಮೋದಿಯವರು ಹೇಳಿಕೆ ನೀಡಿದ್ದಾಗ ಸುಮ್ಮನಿದ್ದ ನೇಪಾಳ, ಈಗ ರಸ್ತೆ ವಿಸ್ತರಣೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದೆ.
ರಸ್ತೆ ವಿಸ್ತರಣೆ ಪ್ರಸ್ತಾಪ ಆಕ್ಷೇಪಾರ್ಹ ಹಾಗೂ ಈ ಭಾಗದಲ್ಲಿ ನಿಯೋಜಿಸಿರುವ ಭಾರತೀಯ ಸೇನಾಪಡೆಗಳನ್ನು ವಾಪಸ್ ಪಡೆಯಬೇಕು ಎಂದು ನೇಪಾಳ ಕಾಂಗ್ರೆಸ್ ಒತ್ತಾಯಿಸಿದೆ.
ಇತ್ತೀಚಿನ ದಿನಗಳಲ್ಲಿ ಗಡಿ ವಿಚಾರಕ್ಕೆ ಸಂಬಂಧಪಟ್ಟಂತೆ ಚೀನಾ, ಭಾರತ ಮತ್ತು ನೇಪಾಳ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹದಗೆಡಲು ಕಾರಣವಾಗಿದೆ.