ರಸ್ತೆ ವಿಭಜಕದ ಮೇಲೇರಿದ ಬಸ್: ಪ್ರಯಾಣಿಕರು ಪಾರು

ಕಲಬುರಗಿ,ನ.17-ರಸ್ತೆ ಸಾರಿಗೆ ಸಂಸ್ಥೆ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮೇಲೇರಿದ ಘಟನೆ ನಗರದ ಮುಖ್ಯರಸ್ತೆಯೊಂದರಲ್ಲಿ ಇಂದು ನಡೆದಿದೆ. ಇದರಿಂದಾಗಿ ಬಸ್‍ನಲ್ಲಿದ್ದ ಪ್ರಯಾಣಿಕರು ಕೆಲಕಾಲ ಭಯ, ಆತಂಕಕ್ಕೆ ಒಳಗಾದರು. ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.