ರಸ್ತೆ ರಿಪೇರಿಗಾಗಿ ಶಾಸಕರಿಗೆ ಮನವಿ

ಶಹಾಬಾದ:ಸೆ.19:ಶಹಾಬಾದ ನಗರದಿಂದ ಜೇವರ್ಗಿ ಪಟ್ಟಣಕ್ಕೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ನಿತ್ಯ ಸಂಚಾರ ಮಾಡುವ ಪ್ರಯಾಣಿಕರಿಗೆ ನರಕಯಾತನೆಯಾಗಿದೆ. ಸತತ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಕೆಸರುಮಯವಾಗಿರುತ್ತದೆ, ದೊಡ್ಡ ದೊಡ್ಡ ಗುಂಡಿಗಳಲ್ಲಿ ನಿತ್ಯ ಬೈಕ್ ಸವಾರರು ಅಪಘಾತವಾಗಿ ಆಸ್ಪತ್ರೆ ದಾಖಲಾಗುತ್ತಿದ್ದಾರೆ ರಸ್ತೆ ಡಾಬಂರೀಕರಣ ಮಾಡಿ ಹಲವಾರು ವರ್ಷಗಳೇ ಉರುಳಿದೆ ಆದಷ್ಟು ಬೇಗೆ ರಸ್ತೆ ಸುದಾರಣೆ ಮಾಡಲು ಪ್ರಯಾಣಿಕರು ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮಡು ಅವರಿಗೆ ಮನವಿ ಸಲ್ಲಿಸಿದರು.
ನಗರದಿಂದ ಮರಗೋಳ ಕಾಲೇಜಿನಿಂದ ತನಸನಹಳ್ಳಿ ಎಸ್ ಗ್ರಾಮದ ವರೆಗೆ ಹಾಗೂ ಎರಡು ಮೂರು ಕಡೆಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದರಿಂದ ಸರಕಾರಿ ಬಸ್ ಜೇವರ್ಗಿ ಹೋಗಲು ಹಿಂದೆಟ್ಟು ಹಾಕುತ್ತಿದ್ದು, ನಿತ್ಯ ಸಂಚಾರ ಮಾಡುವವರು ತಾಸುಗಟ್ಟಲೇ ಬಸ್ ನಿಲ್ದಾಣದಲ್ಲಿಯೇ ಕುಳಿತುಕೊಳ್ಳುವ ಪರಿಸ್ಥಿತಿ ಏರ್ಪಟ್ಟಿದೆ.
ಸರಿಯಾದ ಸಮಯಕ್ಕೆ ಬಸ್‍ಗಳು ಬರುತ್ತಿಲ್ಲ, ರಸ್ತೆಯ ದೊಡ್ಡ ದೊಡ್ಡ ಗುಂಡಿಗಳು ಇರುವುದರಿಂದ ವಾಹನಗಳ ಅಪಘಾತಗಳ ಸಂಖ್ಯೆ ಏರುತ್ತಿದ್ದು, ಈ ರಸ್ತೆಯ ಮೇಲೆ ಸಂಚಾರ ಮಾಡುವುದು ಪ್ರಯಾಣಿಕರಿಗೆ ನರಕಯಾತನೆಯಾಗಿದೆ ಪ್ರಯಾಣಿಕ ರೇಷ್ಮಾ ಅವರು ಹೇಳಿದರು.
ಪ್ರಯಾಣಿಕರ ಮನವಿ ಸ್ವೀಕರಿಸಿದ ಶಾಸಕ ಬಸವರಾಜ ಮತ್ತಿಮಡು ಅವರು ಮಾತನಾಡುತ್ತ, ನಾನು ಸ್ವತಃ ರಸ್ತೆಯನ್ನು ಬಂದು ವೀಕ್ಷಣೆ ಮಾಡಿದ ನಂತರ ಮರಗೋಳ ಕಾಲೇಜ್‍ಯಿಂದ ತನಸನಹಳ್ಳಿ ರಸ್ತೆಗೆ ಹೋಗುವ ರಸ್ತೆ ನಿರ್ಮಾಣಕ್ಕಾಗಿ ಇಗಾಗಲೇ 8 ಕೋಟಿ ರೂಪಾಯಿ ರಸ್ತೆಗಾಗಿ ಮೀಸಲಿಡಲಾಗಿದೆ ಇನ್ನೂ ಕೆಲವೇ ದಿನದಲ್ಲಿ ರಸ್ತೆಯನ್ನು ಕೆಲಸ ಪ್ರಾರಂಭ ಮಾಡಲಾಗುತ್ತದೆ. ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮಾತನಾಡಿ ಜೇವರ್ಗಿ ಚಿತ್ತಾಪೂರ ಮಾರ್ಗಕ್ಕೆ ಸಮಯಕ್ಕೆ ಸರಿಯಾಗಿ ಬಸ್‍ಗಳ ವ್ಯವಸ್ಥೆ ಮಾಡಲು ಹೇಳಿದರು.
ಮುಖಂಡರಾದ ಕನಕಪ್ಪ ದಂಡಗುಲಕರ್, ಶರಣು ವಸ್ತ್ರದ, ಚಂದ್ರಕಾಂತ ಗೊಬ್ಬುರಕರ್, ಪ್ರಯಾಣಿಕರಾದ ಭಾಗ್ಯಶ್ರೀ, ಭೀಮಬಾಯಿ, ರೇಷ್ಮಾ, ಕಾವೇರಿ, ಶೈಲಜಾ, ಪ್ರಮೋದ, ಬಾಬಾ ಪಟೇಲ್, ವಿಜಯಕುಮಾರ, ಅರವಿಂದ ಚವ್ಹಾಣ್, ಗೋಪಾಲರಾವ್, ಸಂತೋಷಕುಮಾರ, ಇತರರು ಪಾಲ್ಗೊಂಡಿದರು.


” ಶಹಾಬಾದ ವಾಡಿ ಕ್ರಾಸ್‍ಯಿಂದ ಬಸವೇಶ್ವರ ರಸ್ತೆಗಾಗಿ 8 ಕೋಟಿ, ಮರಗೋಳ ಕಾಲೇಜ್ ಕ್ರಾಸ್‍ನಿಂದ ಜೇವರ್ಗಿ ಹೋಗುವ ರಸ್ತೆಗೆ 8 ಕೋಟಿ ರೂಪಾಯಿ ಟೆಂಡರ ಆಗಿದ್ದೆ ಶೀಘ್ರದಲ್ಲೇ ಕೆಲಸ ಪ್ರಾರಂಭ ಮಾಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕಾಗಿ ಮಹತ್ವ ನೀಡಲಾಗಿದೆ. – ಬಸವರಾಜ ಮತ್ತಿಮಡು ಶಾಸಕರು.