ರಸ್ತೆ ಮೇಲೆ ಹರಿಯುವ ಚರಂಡಿ ನೀರು: ಸಮಸ್ಯೆಗ ಸ್ಪಂಧಿಸದ ಪಾಲಿಕೆ

ಕಲಬುರಗಿ,ಅ.26- ನಗರದ ವಾರ್ಡ ನಂ.12ರಲ್ಲಿ ಬರುವ ಗಂಜ ಕಾಲೋನಿಯ ಮುಖ್ಯ ಸಿಸಿ ರಸ್ತೆಯಲ್ಲಿರುವ ಚರಂಡಿ ತುಂಬಿ ರಸ್ತೆಮೇಲೆ ಕೋಳೆ ನೀರು ಹರಿಯುತ್ತಿದ್ದು, ಈ ಕುರಿತು ಪಾಲಿಕೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಾಲಿಕೆಯ ಮಾಜಿ ನಾಮನಿರ್ದೇಶಿತ ಸದಸ್ಯ ಮಲ್ಲಿಕಾರ್ಜುನ ಪಿ.ಪಾಟೀಲ ಅವರು ಆರೋಪಿಸಿದ್ದಾರೆ.
ಗಂಜ ಕಾಲೋನಿಯ ಬಾಂಬೈ ನಟಬೊಲ್ಟ ಸಿಸಿ ಮುಖ್ಯ ರಸ್ತೆಯ ಚರಂಡಿ ಬ್ಲಾಕ್ ಆಗಿದ್ದು, ಅದರ ಕೋಳೆ ನೀರು ರಸ್ತೆಯ ಮೇಲೆ ಮತ್ತು ಅಕ್ಕಪಕ್ಕದ ಮನೆಗಳಿಗೆ ಹರಿಯುತ್ತಿದೆ ಇಲ್ಲಿನ ನಾಗರಿಕರಿಗೆ ಮತ್ತು ಈ ಮಾರ್ಗದ ಸಂಚಾರಿಗಳಿಗೆ ತುಂಬ ತೊಂದರೆಯಾಗುತ್ತಿದೆ.
ಇಲ್ಲಿನ ಸಮಸ್ಯೆ ಸರಿಪಡಿಸುವಂತೆ ಹಲವು ಸಲ ಪಾಲಿಕೆಗೆ ಮನವಿ ಮಾಡಿದರೂ ಕ್ಯಾರ ಅನ್ನುತ್ತಿಲ್ಲ. ತಾಳ್ಮೆಗೂ ಒಂದು ಮಿತಿ ಇರುತ್ತದೆ ಈ ಕೂಡಲೇ ಒಳಚರಂಡಿ ದುರಸ್ತಿ ಗೊಳಿಸಿ ಇಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಬಡಾವಣೆಯ ನಾಗರಿಕರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.