ರಸ್ತೆ ಮೇಲೆಲ್ಲಾ ತ್ಯಾಜ್ಯ ನೀರು ;ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಖಂಡನೆ

ಹರಿಹರ.ಏ.8;  ಗಬ್ಬು ವಾಸನೆ ಬೀರುತ್ತಿರುವ ಚರಂಡಿ ತ್ಯಾಜ್ಯ ನೀರು ರಸ್ತೆ ಮೇಲೆಲ್ಲಾ ಕಸ ಕಡ್ಡಿಗಳು ಚೆಲ್ಲಾಪಿಲ್ಲಿಯಾಗಿರುವ ನಗರದ ಡಿ ಎ ಆರ್ ಆರ್ ಎಂ ಸರ್ಕಾರಿ ಪ್ರಾಥಮಿಕ ಶಾಲೆ ಕಾಲೇಜ್ ಮುಖ್ಯ ದ್ವಾರದ ಮುಂಭಾಗದಲ್ಲಿ ಆಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯ ಯುವಕರು ಆರೋಪಿಸಿದರು  ಇತ್ತೀಚೆಗೆ ಪ್ರೌಢಶಾಲೆ ಅಮೃತ ಮಹೋತ್ಸವದ ಮಹೋತ್ಸವ ಸ್ಮರಣೆ ಕೊಠಡಿಗಳ ನಿರ್ಮಾಣಕ್ಕೆ ಶಿಕ್ಷಣ ಸಚಿವರಿಗೆ ಹಳೇ ವಿದ್ಯಾರ್ಥಿಗಳ ಸಂಘ ಬೆಂಗಳೂರಿಗೆ ನಿಯೋಗ ತೆರಳಿ ಶಿಕ್ಷಣ ಸಚಿವರಿಗೆ ಮನವಿಯನ್ನು ನೀಡಿದ್ದರು.ಆದರೆ ಕಳೆದ 2ದಿನಗಳಿಂದ ಕಾಲೇಜು ಮುಂಭಾಗದಲ್ಲಿ ಚರಂಡಿಗಳು ಕಟ್ಟಿಕೊಂಡು  ತ್ಯಾಜ್ಯ ಕಸಕಡ್ಡಿಗಳು, ತ್ಯಾಜ್ಯ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಸಾರ್ವಜನಿಕರು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ವಾಗಿದೆ ಆದರೂ ನಗರಸಭೆ ಆಯುಕ್ತರು ಆರೋಗ್ಯ ನಿರೀಕ್ಷಕರ ಗಳು ಇತ್ತ ಕಡೆ ಗಮನ ಹರಿಸದೆ ಇರುವದು ಸಾರ್ವಜನಿಕರ ಅಧಿಕಾರಿಗಳ ನಡೆಗೆ ಬೇಸತ್ತು ಹೋಗಿದ್ದಾರೆ ಜೆ ಸಿ ಬಡಾವಣೆಯ ಮುಖ್ಯರಸ್ತೆಯಲ್ಲಿ ಗಿರಿಯಮ್ಮ ಕಾಲೇಜ್ ಡಿಆರ್ ಆರ್ ಎಂ ಕಾಲೇಜು ಶಾಲೆಗಳು ಮೈದಾನದಲ್ಲಿ ಪ್ರತಿನಿತ್ಯ ಕ್ರೀಡಾಪಟಗಳು ಕ್ರೀಡೆಗಳನ್ನು ಆಟವಾಡುತ್ತಾರೆ .ಬೆಳಿಗ್ಗೆ ಮತ್ತು  ಸಂಜೆಯಾದರೆ ಹಿರಿಯ ನಾಗರಿಕರು ಯುವಕರು ಮಹಿಳೆಯರು ವಾಯುವಿವಾರಕ್ಕೆ ತೆರಳುತ್ತಾರೆ ಈ ರಸ್ತೆಯಲ್ಲಿ ಸಾಕಷ್ಟು ಸಾರ್ವಜನಿಕರು ವಾಹನ ಸವಾರರು ಸಂಚರಿಸುತ್ತಾರೆ .ಕಾಲೇಜು ಮುಂಭಾಗದಲ್ಲಿ ತ್ಯಾಜ್ಯ ನೀರು ತುಂಬಿಕೊಂಡು ರಸ್ತೆ ಮೇಲೆ ಹರಿಯುತ್ತಿದ್ದು ಗಬ್ಬು ವಾಸನೆ ಬೀರುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ತೋರುತ್ತದೆ .ಎರಡನೆಯ ಹಂತ ಮಹಾಮಾರಿ ವೈರಸ್ ದಿನದಿನಕ್ಕೆ ಹೆಚ್ಚಳವಾಗುತ್ತದೆ ನಗರಸಭೆ ಅಧಿಕಾರಿಗಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ಜಾಗೃತಿ ಮೂಡಿಸುತ್ತಾರೆ ಆದರೆ ನಗರ ಸ್ವಚ್ಛತೆ ಮಾಡುವುದರಲ್ಲೇ ಮೀನಾಮೇಷ ಎಣಿಸುತ್ತಾ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದರು ಕೂಡಲೇ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಚರಂಡಿ ಕಟ್ಟಿಕೊಂಡು ತ್ಯಾಜ್ಯ ನೀರು ರಸ್ತೆ ಮೇಲೆಲ್ಲಾ ಹರಿಯುತ್ತಿದ್ದು ಗಬ್ಬು ವಾಸನೆ ಬೀರುತ್ತಿದೆ ಕೂಡಲೇ ಅದನ್ನು ಸ್ವಚ್ಚತೆ ಮಾಡುವುದಕ್ಕೆ ಮುಂದಾಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ