ರಸ್ತೆ ಮಾಡೋದ್ ಉಂಟು! ಆದರೆ ರೂಲ್ಸ್ ಲೆಕ್ಕಕ್ಕಿಲ್ಲ…,

ಗುತ್ತೇದಾರ ನಾಪತ್ತೆ, ಅಮರಾವತಿಗೆ ಗ್ರಹಣ,
ಮೇಟಿಗೌಡ -ಸಂಜೆವಾಣಿ
ರಾಯಚೂರು ಮಾ ೧೬
ಮಾನ್ವಿ ತಾಲೂಕು ಅಮರಾವತಿ ಗ್ರಾಮದ ಜನ ನಮ್ಮ ಗ್ರಾಮ ಅಭಿವೃದ್ಧಿಯಾಗುತ್ತೆ ರಸ್ತೆ ಸುಧಾರಣೆಯಾಗುತ್ತದೆ ಎಂದು ಕಾದು ಕುಳಿತ ಜನರ ಮುಖದಲ್ಲಿ ಹತಾಶಯದ ಕರೀನೆರಳು ಮೂಡಿದೆ, ಗ್ರಾಮದ ಮುಖ್ಯರಸ್ತೆ ಕಾಮಗಾರಿ ಮಾಡಲು ಪಿ ಆರ್ ಇ ಡಿ ಯೋಜನೆ ಅಡಿಯಲ್ಲಿ ೮೦ಲಕ್ಷ ಹಣ ಸಿ ಸಿ ರಸ್ತೆ ಸುಧಾರಣೆ ಮಾಡಲು ಬಿಡುಗಡೆಯಾಗಿದೆ ಆದರೆ ಅದಕ್ಕೆ ತಕ್ಕಂತೆ ಏನು ಕೆಲಸ ಆಗಬೇಕು ಅ ಕೆಲಸ ಮಾತ್ರ ಆಗುತ್ತಿಲ್ಲ,ರಸ್ತೆ ಮಾಡ್ತಿದಾರೆ ಆದರೆ ಗುತ್ತೇದಾರನಿಗೆ ಮಾತ್ರ ರೂಲ್ಸ್ ಲೆಕ್ಕಕ್ಕಿಲ್ಲ…,
ಗ್ರಾಮದಲ್ಲಿ ಮಣ್ಣು ಮಿಶ್ರಿತ ಕಂಕರ್ ಹಾಕುತ್ತಿದ್ದಾರೆ,ಕೇಳೋಕ್ಕೆ ಮಾತ್ರ ಕಂಕರ್ ಆದರೆ ಅಲ್ಲಿ ೮೦%ಮಣ್ಣು ಮಿಶ್ರಿತ ಮಾಡಿ ಕಂಕರ್ ಹಾಕುತ್ತಿದ್ದಾರೆ,ಅದನ್ನು ಕೇಳಬೇಕು ಎಂದರೆ ಗುತ್ತೇದಾರ ಇರಲ್ಲಾ ಗುತ್ತೇದಾರರಿಗೆ ಒಬ್ಬ ಸೂಪರ್ವೈಸರ್ ಇರ್ತಾನೆ ಕೇಳಿದ್ರೆ ನನಗೆ ಏನು ಗೊತ್ತಿಲ್ಲ ಎಂಬ ಅರಕೆ ಉತ್ತರ ನೀಡುತ್ತಾನೆ, ನಿಯಾಮಗಳನ್ನು ಗಾಳಿಗೆ ತೂರಿ ತನ್ನಿಷ್ಟಕ್ಕೆ ಬಂದಂತೆ ರಸ್ತೆ ಕಾಮಗಾರಿ ಮಾಡುತ್ತಿರುವುದು ಕಂಡುಬರುತ್ತಿದೆ.
ಗುದ್ದಲಿ ಪೂಜೆ ಮಾಡುವಾಗ ಮಾನ್ವಿ ಕ್ಷೇತ್ರದ ಶಾಸಕರಾದ ರಾಜ ವೆಂಕಟಪ್ಪ ನಾಯಕ್ ಅವರು ಗುತ್ತೇದಾರರಿಗೆ ನಿಯಮ ಪ್ರಕಾರ ಸರಿಯಾಗಿ ಕೆಲಸ ಮಾಡಿ ನೀವೂ ಸರಿಯಾಗಿ ಮಾಡದಿದ್ದರೆ ಜನ ನಮ್ಮನ್ನು ಬಯುತ್ತಾರೆ, ಕಷ್ಟ ಪಟ್ಟು ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ವಾರ್ನ್ ಮಾಡಿ ಹೇಳಿದರೂ ಸಹ ಈ ರೀತಿ ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತೇದಾರಾರು ಮಾತ್ರ ಎಲ್ಲೊ ಇದ್ದು ಬೇಕಾಬಿಟ್ಟಿ ರಸ್ತೆ ಕಾಮಗಾರಿ ಮಾಡಿಸುತ್ತಿದ್ದಾರೆ.
ಒಂದು ರಸ್ತೆ ಕಾಮಗಾರಿ ಮಾಡಬೇಕು ಆದರೆ ಯಾವ ರಸ್ತೆ ಮಾಡ್ತಿದಿವಿ, ಅದಕ್ಕೆ ಹಣ ಎಷ್ಟು ಬಿಡುಗಡೆಯಾಗಿದೆ, ಯಾವ ಯೋಜನೆಯಲ್ಲಿ ಕಾಮಗಾರಿಗೆ ಹಣ ಬಂದಿದೆ, ಎಷ್ಟು ದೂರ ರಸ್ತೆ ಕಾಮಗಾರಿ ಮಾಡಬೇಕು ಎಂಬುದು ಬೋರ್ಡ್ ಹಾಕಬೇಕು.,
ಹಾಗೂ ರಸ್ತೆಗೆ ಡಾಂಬರ್ ಎಷ್ಟು ಬಿ ಟಿ ಪರ್ಸೆಂಟ್ ಇರಬೇಕು, ತಿಕ್ನೆಸ್ ಎಷ್ಟ್ ಎಂ ಎಂ ಇರಬೇಕು,ಯಾವ ಗ್ರೇಡ್ ಮೇಟಲಿಂಗ್ ಹಾಕಬೇಕು ಎನ್ನುವ ರೂಲ್ಸ್ ಇರುತ್ತವೆ ಅವುಗಳನ್ನ ಪಾಲಿಸಬೇಕು ಆದರೆ ಇಲ್ಲಿ ಆಗ್ತಿರೋದೇ ಬೇರೆ ರಸ್ತೆ ಕಾಮಗಾರಿ ಮಂಜೂರು ಪತ್ರದಲ್ಲಿ ಇರೋದು ಬೇರೆ…ಇವುಗಳನ್ನು ಕೇಳಲು ಹೋದ್ರೆ ಗುತ್ತೇದಾರನಿಲ್ಲ ಅವರು ಬಂದಿಲ್ಲ ಎನ್ನುವ ಉತ್ತರ ಈ ರಸ್ತೆಗಳನ್ನು ಮಾಡಿಸುವ ಗುತ್ತೇದಾರರು ಮಾತ್ರ ನಾಪತ್ತೆಯಾಗಿದ್ದಾರೆ,ರಸ್ತೆಗಳು ಕಳಪೆ ಮಟ್ಟದಿಂದ ಕೂಡಿವೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇಂತಹ ಗುತ್ತೇದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.
*ಅಮರಾವತಿ ಗ್ರಾಮಕ್ಕೆ ಗ್ರಹಣ
ನಾಲ್ಕು ವರ್ಷಗಳ ಹಿಂದೆ ಗ್ರಾಮಕ್ಕೆ ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ೧ಕೋಟಿ ಹಣ ಬಿಡುಗಡೆ ಆಯ್ತು ಆದರೆ ಆ ಯೋಜನೆ ಇಲ್ಲಿಯವರೆಗೂ ಮುಗಿದಿಲ್ಲ,ಆದರೆ ಗುತ್ತೇದಾರ ಮಾತ್ರ ಇವತ್ತಿಗೂ ಊರಿಗೆ ಕಾಲಿಟ್ಟಿಲ್ಲ.
ಈ ವರ್ಷ ಅಮರಾವತಿಯಿಂದ -ಹಿರೇಕೋಟ್ನೆಕಲ್ ರಸ್ತೆ ಗೆ ೮೦ಲಕ್ಷ ಅನುದಾನ ಪಿ ಆರ್ ಇ ಡಿ ಯೋಜನೆಯಲ್ಲಿ ಬಂತು ಆದರೆ ಅ ರಸ್ತೆಯ ಎಸ್ಟೆಮೆಂಟ್ ನೋಡಿದ್ರೆ ಮಾತ್ರ ದಿಕ್ಕು ತಪ್ಪಿ ಹೋಗುತ್ತೆ ರಸ್ತೆ ಮಾಡಿ ಕೇವಲ ೧೫ದಿನಕ್ಕೆ ಮುರಾಬಟ್ಟೆಯಂತಾಗಿದೆ.
ಈಗ ಗ್ರಾಮಕ್ಕೆ ೧ಕೋಟೆ ೫೦ಲಕ್ಷ ಕೆ ಕೆ ಆರ್ ಡಿ ಬಿ (ಠಿತಿಜ)ಅನುದಾನ ಬಿಡುಗಡೆಯಾಗಿದೆ ಜಾನೇಕಲ್ -ಅಮರಾವತಿ ರಸ್ತೆ ಮಂಜೂರು ಆಗಿದೆ ಆದರೆ ಅದು ಕೂಡ ಅಲ್ಲಲ್ಲಿ ರಸ್ತೆ ಮಾಡ್ತಿದ್ದಾರೆ,ನಿಯಮಗಳು ಲೆಕ್ಕಕ್ಕಿಲ್ಲ ಆದರೆ ಒಂದು ಹಂತಕ್ಕೆ ರಸ್ತೆ ಡಾಂಬರೀಕರಣ ಸರಿಯಾಗ್ತಿಲ್ಲ..,
ಅಮರಾವತಿ ಗ್ರಾಮದ ಮುಖ್ಯ ರಸ್ತೆ ಮಾಡಲು ೮೦ ಲಕ್ಷ ಹಣ ಬಿಡುಗಡೆಯಾಗಿದೆ, ಆದರೆ ತಳ ಬುಡ ಇಲ್ಲದೆ ರಸ್ತೆ ಮಾಡ್ತಿದಾರೆ, ಅದನ್ನ ಕೇಳಬೇಕು ಅಂದ್ರೆ ರಸ್ತೆ ಮಾಡುವಾಗ ಗುತ್ತೇದಾರರೇ ಇರೋದಿಲ್ಲ, ಇವುಗಳನ್ನೆಲ್ಲ ನೋಡಿದಾಗ ಒಟ್ಟಿನಲ್ಲಿ ಊರಿಗೆ ಗ್ರಹಣ ಇಡಿದಿದೆ ಅನಿಸುತ್ತೆ,. ಸಂಬಂಧಪಟ್ಟ ಇಲಾಖೆಯವರು, ಶಾಸಕರು ಸಂಬಂಧಪಟ್ಟ ಗುತ್ತೇದಾರರ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ರಸ್ತೆಗಳನ್ನು ಸರಿಯಾಗಿ ಮಾಡಿಸಿಕೊಡಬೇಕು, ಈ ಹಿಂದೆ ಶಾಸಕರು ಊರಿಗೆ ಬಂದಾಗ ಈ ವಿಷಯ ಗಮನಕ್ಕೆ ತರಲಾಗಿದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ನಮ್ಮ ರಸ್ತೆ ಸರಿಯಾಗಿ ಆಗಬೇಕು ಎಂಬುದು ಊರಿನ ಗ್ರಾಮಸ್ಥರ ಒತ್ತಾಯವಾಗಿದೆ..