ರಸ್ತೆ ಮಧ್ಯ ಕಸ,ಚರಂಡಿನೀರು ಗಮನ ಹರಿಸದ ಪುರಸಭೆ

ಮುದ್ದೇಬಿಹಾಳ:ಎ.6: ಪಟ್ಟಣದ ಇಲ್ಲಿನ ಕುಂಬಾರ ಓಣಿಯಲ್ಲಿ ಕಸ, ಮುಸುರಿ ಸೇರಿದಂತೆ ಆ ಭಾಗದ ಚರಂಡಿ ನೀರು ಹರಿದು ರಸ್ತೆ ಮದ್ಯೆದಲ್ಲಿಯೇ ಬಂದು ನಿಂತರು ಯಾವೋಬ್ಬ ಪುರಸಭೆ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಸ್ವಚ್ಚಗೊಳಿಸುವ ಮೂಲಕ ರೋಗ ಮುಕ್ತರನ್ನಾಗಿ ಮಾಡುವಲ್ಲಿ ಮನಸ್ಸು ಮಾಡುತ್ತಿಲ್ಲ ಇದರಿಂದ ನಿತ್ಯ ಸಾರ್ವಜನಿಕರು ಅಧಿಕಾರಿಗಳಿಗೆ ಜನಪ್ರತಿನಧಿಗಳು ಹಿಡಿ ಶಾಪ ಹಾಕುತ್ತಿದ್ದಾರೆ.

ಕಳೇದ ಹಲವು ವರ್ಷಗಳಿಂದ ಈ ಬಡಾವಣೆಯಲ್ಲಿ ಬಹುದೊಡ್ಡ ಕೋಟೆಗೋಡೆಗಳು ಇದ್ದು ಇವುಗಳ ಕಂದಕಗಳ ಮೂಲಕ ಹಾಯ್ದು ಇಲ್ಲಿನ ನಿವಾಸಿಗಳು ರಸ್ತೆಗಳನ್ನು ನಿರ್ಮಿಸಲಾಗಿದೆ.

ಜೊತೆಗೆ ಈ ಭಾಗದಲ್ಲಿ ಪ್ರತ್ಯೇಕ ಶೌಚಾಲಯವಿಲ್ಲದ ಮಹಿಳೆಯರು ಮತ್ತು ಪುರಷರು ಸಾಮೂಹಿಕ ಬಹಿರ್ದೇಸೆಗೆ ತೆರಳುತ್ತಾರೆ. ಇದರಿಂದಾಗಿ ಸುತ್ತಲೂ ಬಹುದೊಡ್ಡ ಚರಂಡಿಯ ಮಲೀನ ನೀರು ರಸ್ತೆ ಮೇಲೆಲ್ಲ ಹರಿದಾಡಿ ಭಾರಿ ದುರ್ನಾತ ಮಾತ್ರವಲ್ಲದೇ ನಿಂತ ಮಲೀನ ನೀರಿನಿಂದ ವಿವಿಧ ಸೊಳ್ಳೆಗಳು ಸಣ್ಣ ಮಕ್ಕಳು ಸೇರಿದಂತೆ ದೊಡ್ಡ ವಯಸ್ಸಿನವರಿಗೂ ಕಚ್ಚಿ ಮಲೇರಿಯಾ, ಡೇಂಗ್ಯೂ ಸೇರಿದಂತೆ ವಿವಿಧ ಸಾಂಕ್ರಾ ಮಿಕ ರೋಗಗಳಿಗೆ ಬಲಿಯಾಗುತ್ತಲೆ ಇದ್ದಾರೆ. ಜತೆಗೆ ಮೊದಲೇ ಮಹಾಮಾರಿ ಕೋರೊನಾದಂತಹ ಕೆಟ್ಟ ರೋಗವೂ ಕೂಡ ಅವತರಿಸಿಕೊಂಡಿದೆ.

ಆದರೇ ಭಾಗದ ಜನಪ್ರತಿನಿದಿಗಳಾಗಲಿ ಅಥವಾ ಪುರಸಭೆ ಅಧಿಕಾರಿಗಳಾಗಲಿ ರೋಗ ಮುಕ್ತ ವಾತವರಣ ನಿರ್ಮಿಸಲು ಶೌಚಾಲಯ ಮತ್ತು ರಸ್ತೆ ಮೇಲೆ ಚರಂಡಿ ನೀರು ಹರಿಯದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಈ ಬಡಾವಣೆ ಸಾರ್ವಜನಿಕರು ಸಾಕಷ್ಟು ಬಾರಿ ಮೌಕಿಕವಾಗಿ ತಿಳಿಸಿದರು ಯಾವೋಬ್ಬ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಮನಸ್ಸು ಮಾಡುತ್ತಿಲ್ಲ.

ಇದು ಮಾತ್ರವಲ್ಲದೇ ಸರಿಯಾಗಿ ಕುಡಿಯುವ ನೀರು, ಸಮರ್ಪಕ ವಿದ್ಯುತ್ ಸಂಪರ್ಕ ಸೇರಿದಂತೆ ಹಲವು ರೀತಿ ಮೂಲಬೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲಾಗಿದ್ದಾರೆ. ಎಲ್ಲೇಂದರಲ್ಲಿ ಬೇಕಾಬಿಟ್ಟಿಯಾಗಿ ಸ್ಥಳಿಯ ನಿವಾಸಿಗಳು ಪ್ಲಾಷ್ಠಿಕ, ಕಸ ಇಲ್ಲಿಯೇ ಎಸೆದುಹೊಗುತ್ತಾರೆ ಪರಿಸರದ ಮತ್ತು ಸ್ವಚ್ಚತೆಯ ಬಗ್ಗೆ ಒಂದುದಿನವೂ ಪುರಸಭೆ ಅಧೀಕಾರಿಗಳು ಜಾಗೃತಿ ಮೂಡಿಸುವ ಮೂಲಕ ಸ್ವಚ್ಛತೆ ಕಾಪಾಡುವ ಕಾರ್ಯ ಮಾಡಿಲ್ಲ.

ಇದರಿಂದಾಗಿ ಜನರು ಸಾಕಷ್ಟು ಸಮಸ್ಯೆ ಬಳಲುತ್ತಿದ್ದಾರೆ ಜೊತೆಗೆ ಮೂಗು ಮುಚ್ಚಿಕೊಂಡೆ ಮಕ್ಕಳು ಮತ್ತು ದೊಡ್ಡವರು ಈ ರಸ್ತೆಗಳ ಮೇಲೇಯೇ ಸಂಚರಿಸುತ್ತಿದ್ದಾರೆ.

ಈಗಲಾದರೂ ಪುರಸಭೆ ಅಧಿಕಾರಿಗಳು ಕುಂಬಾರ ಓಣಿಯಲ್ಲಿ ಸ್ವಚ್ಚತೆಯ ಬಗ್ಗೆ ಎತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತಾಗಲಿ ಸಾರ್ವಜನಿಕರಿಗೆ ರೋಗ ಮುಕ್ತ ವಾತಾವರಣ ನಿರ್ಮಿಸುವತ್ತ ಪ್ರಯತ್ನಿಸಲಿ ಹಲವು ದಿನಗಳಿಂದ ಈ ರೀತಿಯ ಧುರ್ವಾಸನೆ ಬೀರುವ ವಾತಾವರಣವನ್ನು ಸ್ವಷ್ಚತೆಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೇಂದು ಈ ಬಾಡಾವಣೆ ಸಾರ್ವಜನಿಕರ ಅಭಿಪ್ರಾಯವಾಗಿದೆ.


ಈಗಾಗಲೇ ಹಲವು ವರ್ಷಗಳಿಂದ ಈ ಬಡಾವಣೆಯ ಕೋಟೆ ಗೋಡೆ ಹತ್ತಿರ ಕಸಕಡ್ಡಿ ಪ್ಲ್ಯಾಸ್ಟೀಕ್ ಎಸೆಯುತ್ತಿದ್ದಾರೆ. ಈ ಬಗ್ಗೆ ಸ್ಥಳಿಯ ಪುರಸಭೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ಅದಲ್ಲದೇ ಶಾಶ್ವತ ಸ್ವಚ್ಛತೆಗೆ ಆದ್ಯತೆ ನೀಡಿ ನಿತ್ಯ ಸ್ವಚ್ಚತೆ ಕಾರ್ಯ ಮಾಡಬೇಕು ಅಂದಾಗ ಮಾತ್ರ ನಾವೇಲ್ಲ ಆರೋಗ್ಯವಂತರಾಗಿರಲು ಸಾಧ್ಯ.

ಶಿವು ಮಡಿವಾಳರ ಸ್ಥಳಿಯ ನಿವಾಸಿ