ರಸ್ತೆ ಬದಿ ವ್ಯಾಪಾರಿಗಳಿಗೆ ಸ್ಥಳ ಗುರುತಿಸಿ: ಶಶಿಕುಮಾರ್

ಸಂಜೆವಾಣಿ ವಾರ್ತೆ
ಹನೂರು ಫೆ 22 :- ನಾಗಪ್ಪ ವೃತ್ತ ಬಸ್ ನಿಲ್ದಾಣಕ್ಕೆ ಇನ್ಸ್ಪೆಕ್ಟರ್ ಶಶಿಕುಮಾರ್ ಹಾಗೂ ಸಬ್ ಇನ್ಸ್ಪೆಕ್ಟರ್ ರಿಹನಾಬೇಗಂ ಮಂಗಳವಾರ ಭೇಟಿ ನೀಡಿ ಸಾರ್ವಜನಿಕರಿಗೆ ಅಡಚಣೆ ಆಗದಂತೆ ತಳ್ಳುಗಾಡಿಗಳನ್ನು ನಿಲ್ಲಿಸಬೇಕು. ಜಾಗೃತರಾಗಿ ವಾಹನ ಸವಾರರು ಚಲಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಹನೂರು ಪಟ್ಟಣದ ಪಂಚಾಯಿತಿ ಮುಂಭಾಗ
ಖಾಸಗಿ ಬಸ್ ನಿಲ್ದಾಣ, ದಿ. ನಾಗಪ್ಪ ವೃತ್ತ ಬಳಿ ಎಲ್ಲಂದಲ್ಲಿ ಬಸ್ ಸೇರಿದಂತೆ ಕಾರು, ಬೈಕ್ ಗಳು ಹಾಗೂ ಇನ್ನಿತರ ವಾಹನಗಳು ನಿಲುಗಡೆ ಆಗುತ್ತಿದೆ ಇದರಿಂದ ಸಾರ್ವಜರಿಗೆ ಕಿರಿಕಿರಿ ಉಂಟಾಗಲಿದೆ ಹೀಗಾಗಿ ವಾಹನ ಸವಾರರು ವಾಹನಗಳನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಬೇಕು.
ಸಾರ್ವಜನಿಕ ಸ್ಥಳದಲ್ಲಿ ಅತಿ ವೇಗ ಹಾಗೂ ಹೆಲ್ಮೆಟ್ ಧರಿಸದೆ ಇರುವುದು, ಧೂಮಪಾನ ತಂಬಾಕು ಉಪಯೋಗಿಸುವುದು ಸರಿಯಲ್ಲ ಇಂತಹವು ಕಂಡು ಬಂದರೆ ಕಾನೂನು ರೀತಿ ದಂಡ ವಿಧಿಸಲಾಗುವುದು ಎಂದು ಖಡಕ್ಕಾಗಿ ಎಚ್ಚರಿಸಿದ್ದಾರೆ.
ಶ್ರೀ ಮಲೆ ಮಾದೇಶ್ವರಕ್ಕೆ ಬೆಟ್ಟ ಮಾರ್ಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಜರುಗುತ್ತಿದೆ ಇಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸಲಿದ್ದು, ಇದೆ ಮಾರ್ಗದಲ್ಲಿ ಸಾರ್ವಜನಿಕರು, ವೃದ್ಧರು, ಮಹಿಳೆಯರು, ಯುವತಿಯರು ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಸಹ ಬಂದು ಹೋಗಲಿದ್ದಾರೆ.
ಹೀಗಾಗಿ ಯಾರಿಗೂ ತೊಂದರೆ ಕಿರಿಕಿರಿ ಆಗದಂತೆ ವಾಹನ ಸವಾರರು, ಹಾಗೂ ಬೆಟ್ಟಕ್ಕೆ ತೆರಳುವ ಭಕ್ತಾದಿಗಳು ರಸ್ತೆಯಲ್ಲಿ ಅಡ್ಡದಿಡ್ಡಿಯಾಗಿ ಚಲಿಸಬಾರದು, ಅಡ್ಡಲಾಗಿ ನಿಲ್ಲಿಸಬಾರದು ಎಂದರಲ್ಲದೆ ಎಲ್ಲಾ ವಾಹನ ಸವಾರರು ಅಗತ್ಯ ದಾಖಲೆ ಹೊಂದಬೇಕು ಎಂದು ಇದೆ ವೇಳೆ ಪೆÇಲೀಸರು ಕಿವಿ ಮಾತು ಹೇಳಿದರು.
ಪಟ್ಟಣದ ಪಂಚಾಯತಿ ಮುಂಭಾಗ ಬೀದಿ ಬೀದಿ ವ್ಯಾಪಾರಿಗಳು ಕೈಗಾಡಿಯಲ್ಲಿ ಹಣ್ಣು ಹಂಪಲ ವ್ಯಾಪಾರ ಮಾಡುವವರಿಗೆ ಜೀವನಕ್ಕೆ ಅನುಕೂಲ ವಾಗುವಂತ ಸೂಕ್ತ ಸ್ಥಳ ವ್ಯವಸ್ಥೆ ಮಾಡಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೈಜೋಡಿಬೇಕು. ಸಾರ್ವಜನಿಕರಿಗೆ ಶಾಂತಿ, ಭಂಗವಾದಂತೆ ದ್ವನಿ ವರ್ಧಕ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಹನೂರು ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಅಶೋಕ್ , ಪಟ್ಟಣ ಪಂಚಾಯತಿಯ ಸದಸ್ಯರು ಸೇರಿದಂತೆ ಪೆÇಲೀಸ್ ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.