ರಸ್ತೆ ಬದಿ ಬೆಂಕಿ: ಅಪಘಾತದಿಂದ ಕುಟುಂಬಸ್ತರಿಗೆ ಗಂಭೀರ ಗಾಯ

ಗದಗ: ರಸ್ತೆ ಪಕ್ಕದ ವಣ ಹುಲ್ಲುಗೆ ಬೆಂಕಿ ಹಚ್ಚಿದ್ದರಿಂದ ದಟ್ಟವಾದ ಹೊಗೆಯಲ್ಲಿ ದಾರಿ ಕಾಣದೆ ಬೈಕ್ ಸವಾರನ ಕುಟುಂಬ ಬೆಂಕಿನಲ್ಲಿ ಬಿದ್ದಿರುವ ಘಟನೆ ಗದಗ ಜಿಲ್ಲೆ ರೋಣ ಪಟ್ಟಣದ ಬಳಿ ನಡೆದಿದೆ.
ಈ ಬೆಂಕಿ ದುರಂತದಲ್ಲಿ ಬೈಕ್ ಸವಾರ, ಹಿಂಬದಿ ಕುಳಿತ ತಾಯಿ ಮಗುವಿಗೆ ಗಂಭೀರ ಗಾಯಗಳಾಗಿವೆ. ಬೈಕ್ ಸವಾರ ನಾಗರಾಜ್ ಯಾವಣಕಿ, 2 ವರ್ಷದ ಮಗು ಲಲಿತಾ ಹಾಗೂ ತಾಯಿ ಅಕ್ಕಮ್ಮ ಎಂಬುವರಿಗೆ ಗಾಯಗಳಾಗಿವೆ. ಬೈಕ್ ಸುಟ್ಟು ಸಂಪೂರ್ಣ ಕರಕಲಾಗಿದ್ದು, ಇದು ರೋಣ ಹಾಗೂ ಜಕ್ಕಲಿ ನಡುವೆ ಘಟನೆ ಸಂಭವಿಸಿದೆ.
ರಸ್ತೆ ಪಕ್ಕದಲ್ಲಿನ ಹುಲ್ಲುಗೆ ಬೆಂಕಿ ಹಚ್ಚಿದ್ದರಿಂದ ರಸ್ತೆ ತುಂಬೆಲ್ಲಾ ಹೊಗೆ ಆವರಿಸಿದೆ. ಹೊಗೆಯಲ್ಲೆ ಬೈಕ್ ನಲ್ಲಿ ಸಂಚಾರ ಮಾಡುವ ವೇಳೆ ರಸ್ತೆ ಕಾಣದೆ ರಸ್ತೆ ಪಕ್ಕ ಬೆಂಕಿಯಲ್ಲಿ ಬಿದ್ದಿದ್ದಾನೆ. ಕೂಡಲೆ ಸ್ಥಳಿಯರು ಈ ಮೂವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ದಾವಿಸಿ ಬೆಂಕಿ ನಂದಿಸಿದರು. ಗಾಯಗೊಂಡ ಬೈಕ್ ಸವಾರ, ಮಗು, ತಾಯಿಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ಕರೆತಂದ್ರೂ ಸಿಬ್ಬಂದಿಗಳು ಬೇಗ ಬಾರದ ಹಿನ್ನಲೆ ಆಯಂಬುಲೆನ್ಸ್ ನಲ್ಲೇ 15 ನಿ ಮಗು, ತಾಯಿ ನರಳಾಡಬೇಕಾಯಿತು. ನಂತರ ಸಂಬಂಧಿಕರೇ ತುರ್ತು ಚಿಕಿತ್ಸಾ ಘಟಕ್ಕೆ ಮಗುವನ್ನು ಎತ್ತಿಕೊಂಡು, ನಂತರ ತಾಯಿಯನ್ನು ಸ್ಟ್ರೇಚ್ಚರ್ ನಲ್ಲಿ ಶಿಫ್ಟ್ ಮಾಡಲಾಯಿತು. ಜಿಮ್ಸ್ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದರು.