ರಸ್ತೆ ಬದಿಯ ಜಾಲಿಗಿಡ ತೆರವುಗೊಳಿಸಿ

ಗಬ್ಬೂರು.ನ.4- ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ-ಶಾವಂತಗೇರಾ ರಸ್ತೆಯ ಮಾರ್ಗ ಮಧ್ಯದಲ್ಲಿ ಎರಡು ಬದಿಯಿಂದ ಜಾಲಿಗಿಡ ಬೆಳೆದಿದ್ದು, ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.ರಸ್ತೆಯಲ್ಲಿ ಎದುರುಗಡೆ ವಾಹನ ಬಂದರೆ ಪಕ್ಕಕ್ಕೆ ನಿಂತು ವಾಹನ ತೆರಳಲು ಅನುವು ಮಾಡಿಕೊಡದಷ್ಟು ಜಾಗ ಇಲ್ಲ. ಇದರಿಂದ ಜಾಲಿಗಿಡದ ಮುಳ್ಳು ಕಣ್ಣಿಗೆ ಬಡಿಯುವ ಅಪಾಯವಿದೆ. ಅದರಂತೆ ಇಂಗಳದಾಳ ಗ್ರಾಮಕ್ಕೂ ತೆರಳುವ ರಸ್ತೆ ಇದೆ ದುಸ್ಥತಿಯಲ್ಲಿ ಇದೆ ಸಂಬಂಧಪಟ್ಟ ಪಿಡಬ್ಲ್ಯೂಡಿ ಅಧಿಕಾರಿಯಾದ ನೂಸರತ್ ಅಲಿ ಅವರು ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸುಂಕೇಶ್ವರಹಾಳ ಗ್ರಾಮದ ನಿವಾಸಿ ಅಮರೇಶ ಒತ್ತಾಯಿಸಿದ್ದಾರೆ