ರಸ್ತೆ ನಿರ್ಮಾಣ ಕಾರ್ಯ ವಿಳಂಬ:ಗುತ್ತೇಗೆದಾರರ ವಿರುದ್ದ ಕ್ರಮಕ್ಕೆ ಒತ್ತಾಯ

ರಾಯಚೂರು,ನ.೧೬- ನಗರದ ತೀನ್ ಕಂದಿಲ್ ರಸ್ತೆಯಿಂದ ಅಶೋಕ ಡಿಪೋ ವೃತ್ತದವರೆಗೆ ರಸ್ತೆ ಅಗಲೀಕರಣ ಮತ್ತು ರಸ್ತೆ ನಿರ್ಮಾಣ ಕಾರ್ಯ ವಿಳಂಬ ಹಿನ್ನಲೆಯಲ್ಲಿ ಈ ಭಾಗದ ನಿವಾಸಿಗಳು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಕೂಡಲೇ ರಸ್ತೆ ಅಗಲೀಕರಣ ಮತ್ತು ರಸ್ತೆ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಪೂರ್ಣ ಗೊಳಿಸಬೇಕು ಎಂದು ಒತ್ತಾಯಿಸಿ ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ದಿ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮಾ.೩ ೨೦೨೧ ರಂದು ತೀನ್ ಕಂದಿಲ್ ರಸ್ತೆಯಿಂದ ಅಶೋಕ ಡಿಪೋ ವೃತ್ತದವರೆಗೆ ರಸ್ತೆ ಅಗಲೀಕರಣ ಕಾರ್ಯ ಹಾಗೂ ರಸ್ತೆ ನಿರ್ಮಾಣ ಕಾರ್ಯ ಪ್ರಾರಂಭವಾಯಿತು.ಆದರೆ ಮಾರ್ಚ್ ನಿಂದ ನ ತಿಂಗಳವರೆಗೆ ಕೆಲಸ ಸ್ಥಿಗಿತ ಗೊಳಿಸಿದ್ದಾರೆ.ಮನಬಂದಂತೆ ರಸ್ತೆ ಅಗಲೀಕರಣ,ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ.ನಗರ ಸಭೆ ಪೌರಾಯುಕ್ತರು ನಗರಸಭೆ ಎ. ಇ. ಇ ಮತ್ತು ವರ್ಕ್ ಇನ್ಸ್ಪೆಕ್ಟರ್ ಮನಬಂದಂತೆ ಕಟ್ಟಡಗಳನ್ನು ತೇರುವುಗೊಳಿಸಿ ಲೋಕೋಪಯೋಗಿ ಇಲಾಖೆಯ ಕಾನೂನಿನಂತೆ ನೀತಿ ನಿಯಮಗಳನ್ನು ಉಲ್ಲಂಘಸಿ ಬಡಾವಣೆ ನಿವಾಸಿಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.
ಲೋಕೋಪಯೋಗಿ ಇಲಾಖೆ ರಸ್ತೆ ಅಗಲೀಕರಣ ಮತ್ತು ರಸ್ತೆ ನಿರ್ಮಾಣ ಕಾರ್ಯ ಪ್ರಥಮ ದರ್ಜೆ ಗುತ್ತೇದಾರರಾದ ಶೇಷಗಿರಿರಾವ್ ಇವರಿಗೆ ವರ್ಕ್ ಆರ್ಡರ್ ನೀಡಿದೆ . ಆದರೆ ಡ್ಯಾಡಿ ವೀರೇಶ ಎಂಬುವವರು ನಗರಸಭೆ ಅಧಿಕಾರಿಗಳೊಂದಿಗೆ ಶಾಮೀಲಾಗಿ ಉಪಗುತ್ತಿಗೆಯನ್ನು ಪಡೆದಿದ್ದಾರೆ ಎಂದು ಆರೋಪಿಸಿದರು.
ವಾರ್ಡ್ ನ ೧೨ ,೧೪ ರ ನಿವಾಸಿಗಳು ಡೆಂಗ್ಯೂ ,ಮಲೇರಿಯಾ ರೋಗಗಳಿಗೆ ತುತ್ತಾಗುತ್ತಿದ್ದಾರೆ.ಕೂಡಲೇ ಗುತ್ತೇದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.ಹಾಗೂ ರಸ್ತೆ ನಿರ್ಮಾಣ ಕಾರ್ಯದ ಸ್ಥಳಕ್ಕೆ ಬೇಟಿ ನೀಡಿ ರಸ್ತೆ ನಿರ್ಮಾಣ ಕಾರ್ಯ ಶೀಘ್ರ ಮುಗಿಸಲು ಸೂಚನೆ ನೀಡಬೇಕು ಅಧ್ಯಕ್ಷ ಎನ್.ಮಹಾವೀರ ಅವರು ಒತ್ತಾಯಿಸಿದರು.