ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ನರಗುಂದ,ಮಾ23: 126.86 ಕೋಟಿ ರೂ ವೆಚ್ಚದ ರಾಜ್ಯ ರಾಷ್ಟ್ರೀಯ ಹೆದ್ದಾರಿ 218ರಲ್ಲಿನ ನರಗುಂದ ಪಟ್ಟಣದ ಹೊರವಲಯದ ರಸ್ತೆ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು.
ನಾನು ಹಾಗೂ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಪ್ರಲ್ಹಾದ ಜೋಶಿಯವರೊಂದಿಗೆ ದೆಹಲಿಗೆ ತೆರಳಿ ಗೋವಾ ವಿಮೋಚನೆಗಾಗಿ ಹೋರಾಟ ಮಾಡಿದ ಅಂದಿನ ಜನಸಂಘದ ಮಂಚೂಣಿ ನಾಯಕ ದಿವಂಗತ ಜಗನ್ನಾಥರಾವ್ ಜೋಶಿಯವರ ಕರ್ಮಭೂಮಿಯಾಗಿರುವ ನರಗುಂದ ಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲಾಗುತ್ತಿದ್ದು ಭೂ ಸ್ವಾಧೀನ ಪ್ರಕ್ರಿಯೆಗೆ ಕೇಂದ್ರ ಸರಕಾರದಿಂದಲೇ ಹಣ ಭರಿಸಬೇಕು ಎಂದು ಹೇಳಿದ ಕೂಡಲೇ ಭೂಸ್ವಾಧೀನ ಪ್ರಕ್ರಿಯೆಗೆ ನೂರಕ್ಕೆ ನೂರು ಕೇಂದ್ರದಿಂದ ಹಣ ಬಹರಿಸುವುದಾಗಿ ನಿತಿನ್ ಗಡಕರಿ ಒಪ್ಪಿಗೆ ನೀಡಿದರು ಎಂದು ಸಚಿವ ಪಾಟೀಲ ಹೇಳಿದರು.
ಈಗಾಗಲೇ ನಾನು ನರಗುಂದ ಮತಕ್ಷೇತ್ರದ ಪ್ರತಿಯೊಂದು ಗ್ರಾಮ ಹಾಗೂ ನರಗುಂದ ಪಟ್ಟಣದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಫ್ಲೆಕ್ಸ್ ಮೂಲಕ ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ನರಗುಂದ ಮತಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ನಿಮ್ಮ ಮುಂದೆ ಮತ ಕೇಳಲು ಬರುತ್ತೇನೆ ಎಂದು ಹೇಳಿದರು
ಪ್ರಸ್ತುತ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗೆ ಕೊಡಮಾಡಿದ ಉಚಿತ ಟ್ಯಾಬ್ ಗಳನ್ನು ಸಾಂಕೇತಿವಾಗಿ ಸಚಿವ ಪಾಟೀಲರು ವಿತರಣೆ ಮಾಡಿದರು.
ಪುರಸಭೆ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಹವಾಲ್ದಾರ್ ಎ ಎಮ್ ಹುಡೇದ ಎಮ್ ಎಸ್ ಪಾಟೀಲ್ ಬಿ ಬಿ ಐನಾಪುರ ಎಮ್ ಎಚ್ ತಿಮ್ಮನಗೌಡ್ರ ಶಿವಾನಂದ ಮುತವಾಡ, ಅನಿಲ್ ಮೆಣಸಿನಕಾಯಿ ಉಪಸ್ಥಿತರಿದ್ದರು.