ರಸ್ತೆ ನಿಯಮ ಪಾಲಿಸಿ

ಧಾರವಾಡ,ಏ1: ನಿಮ್ಮಜೀವ ಸುರಕ್ಷತೆ ಇರಬೇಕೆಂದರೆ ರಸ್ತೆ ನಿಯಮಗಳನ್ನು ಪಾಲಿಸಿ ಎಂದು ಕಲಘಟಗಿ ತಾಲೂಕಿನ ಪಿ.ಎಸ್.ಆಯ್ ಬಸವರಾಜ ಯದ್ದಲಗುಡ್ಡ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಟಪವು, ಕಲಘಟಗಿಯ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಗುಡ್‍ನ್ಯೂಜ್ ಪ್ರಥಮ ದರ್ಜೆಕಾಲೇಜಿನ ಸಹಯೋಗದಲ್ಲಿಕಲಘಟಗಿ ತಾಲೂಕಿನ ಗಂಭ್ಯಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಜಾನಪದ ಸಂಭ್ರಮ' ಕಾರ್ಯಕ್ರಮದಲ್ಲಿಕಾನೂನು ಅರಿವು’ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಯುವಕರು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಹಾಕಬೇಕು, ಕಾರು ಚಲಾಯಿಸುವಾಗ ಸಿಟ್ ಬೆಲ್ಟ ಹಾಕಬೇಕು. ಕಾನೂನುಗಳು ಇರುವುದು ಜನರ ಸುರಕ್ಷತೆಗಾಗಿ. ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿದರೆ ಎಲ್ಲರೂ ಸುರಕ್ಷಿತವಾಗಿ ಪ್ರಯಾಣ ಮಾಡಬಹುದು ಸೋಷಿಯಲ್ ಮಿಡಿಯಾಉಪಯೋಗಿಸುವವರು ಬಹಳ ಎಚ್ಚರಿಕೆಯಿಂದ ಇರಬೇಕು ಮತ್ತುಅನವಶ್ಯಕವಾಗಿ ಫೇಸ್ಬುಕ್, ಇನ್‍ಸ್ಟ್ರಾಗ್ರಾಮ ಮುಂತಾದ ಜಾಲತಾಣಗಳಲ್ಲಿ ಗೊತ್ತಿಲ್ಲದವರ ಜೊತೆಗೆ ಯಾವುದೆ ರೀತಿಯ ವ್ಯವಹಾರ ಇಟ್ಟುಕೊಳ್ಳಬಾರದು. ಯಾವುದೇ ವೆಬ್‍ಸೈಟ್‍ಗಳನ್ನು ಮತ್ತು ಲಿಂಕ್‍ಗಳನ್ನು ಅವುಗಳು ಅತೆಂಟಿಕ್ ಚೆಕ್ ಮಾಡದೆ ಒತ್ತಬಾರದು. ಹಾಗೆ ಮಾಡುವುದರಿಂದ ನಮ್ಮ ಖಾತೆಯಲ್ಲಿನ ಹಣ ಖದೀಮರು ಕದಿಯುವುದಕ್ಕೆ ಅವಕಾಶ ನೀಡಿದಂತಾಗುತ್ತದೆ. ಅದಕ್ಕಾಗಿ ಮೊಬೈಲ್ ಬಳಸುವಾಗ ಅರವಿನೊಂದಿಗೆ ಬಳಸಿರಿ ಎಂದು ಯುವಕರಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಜಿನದತ್ತ ಹಡಗಲಿ, ಹಿಂದಿನ ಕೋಶಾಧ್ಯಕ್ಷರಾದ ಶಿವಾನಂದ ಭಾವಿಕಟ್ಟಿ, ಇದ್ದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಮಹೇಶ ಧ.ಹೊರಕೇರಿಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮಗ್ರಾಮಕ್ಕೆ ಸ್ವಯಂ ಸೇವೆ ಸಲ್ಲಿಸಲು ಆಗಮಿಸಿದ ಸಂದರ್ಭದಲ್ಲಿಅವರಜೊತೆಗೆಊರಿನಯುವಕರು ಕೈ ಜೊಡಿಸಿದರೆ ಒಂದುಗ್ರಾಮವನ್ನು ಮಾದರಿಗ್ರಾಮವನ್ನಾಗಿ ಮಾಡಬಹುದೆಂದರು.
ಶಾಂತಲಾ ಸಂಶಿಮಠ ಹಾಗೂ ಸಂಗಡಿಗರು ಪ್ರಾರ್ಥಿಸಿದರು.ನೀಲಮ್ಮಕಲಕೇರಿಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿಎನ್.ಎಸ್.ಎಸ್‍ಕಾರ್ಯಕ್ರಮಾಧಿಕಾರಿ ಮಹಾದೇವ ಉಳ್ಳಾಗಡ್ಡಿ, ಉಪನ್ಯಾಸಕಾರದಅಕ್ಷತಾ ಕುಬಿಹಾಳ, ಎನ್.ಎಂ.ನಿಂಬಣ್ಣವರ, ರೆಹಮಾನಸಾಬ ಗೋಳಲ್ಲಿ ಹಾಗೂ ಸ್ವಯಂ ಸೇವಕರುಊರಿನ ಹಿರಿಯರು, ಮಹಿಳೆಯರು ಭಾಗವಹಿಸಿದ್ದರು.
ನಂತರ ಹರ್ಲಾಪುರದ ಶಂಭಯ್ಯ ಹಿರೇಮಠ, ಸಿ.ವಾಯ್.ಸಿ.ಡಿ ಕಲಾ ಸಂಘ, ಹರ್ಲಾಪೂರ ಹಾಗೂ ತಂಡದವರುಜಾನಪದÀ ಸಂಭ್ರಮದಲ್ಲಿ ಅನೇಕ ಜಾಗೃತಿ ಗೀತೆಗಳನ್ನು ಹಾಡುವುದರೊಂದಿಗೆರೈತಗೀತೆ ಮತ್ತು ಹಾಸ್ಯಕಾರ್ಯಕ್ರಮ ನಡೆಸಿಕೊಟ್ಟು ಪ್ರೇಕ್ಷಕರನ್ನು ರಂಜಿಸಿದರು.