ರಸ್ತೆ ನಿಯಮ ಉಲ್ಲಂಘನೆ ಮತ್ತು ಪಾರ್ಕಿಂಗ್ ಮಾಡಿದರೆ ಹುಷಾರ್

ಹೊನ್ನಾಳಿ.ಮಾ.27:   ಹೊನ್ನಾಳಿ ತುಮ್ಮಿನಕಟ್ಟೆ ರಸ್ತೆಯ ಬದಿಗೆ ಪಾರ್ಕಿಂಗ್ ಮಾಡಲು  ಬಣ್ಣದ ಪಟ್ಟೆ  ಹೊಡೆದು ಪಾರ್ಕಿಂಗಿಗೆ ವ್ಯವಸ್ಥೆ ಮಾಡಲಾಗಿದೆ ಆದರೂ ಸಹ ಸಾರ್ವಜನಿಕರು  ಪಟ್ಟೆಯ ಹೊರಗಡೆ ಬೈಕನ್ನು ನಿಲ್ಲಿಸಿ ಹೋಗುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಓಡಾಡಲು ತೊಂದರೆ ಯಾಗುತ್ತಿದ್ದು ನೋ ಪಾರ್ಕಿಂಗ್ ಸ್ಥಳದಲ್ಲಿ  ಬೈಕ್ ಗಳನ್ನು ಪಾರ್ಕಿಂಗ್ ಮಾಡಿದ್ದೇ ಆದಲ್ಲಿ ಅಂತಹ ಬೈಕ್ ಗಳ ಫೋಟೋ ತೆಗೆದು ಅಪ್ ಲೋಡ್ ಮಾಡಿದರೆ ನಿಮ್ಮ ಮನೆಗೇ ಬರುತ್ತದೆ 1000 ರೂ  ಫೈನ್ ನೋಟಿಸ್ . ಇನ್ನು ಮುಂದಾದರೂ ಸಾರ್ವಜನಿಕರು ತಮ್ಮ ತಮ್ಮ ಬೈಕನ್ನು ಪಾರ್ಕಿಂಗ್ ರೂಲ್ಸ್ ಪ್ರಕಾರ ತಮ್ಮ ವಾಹನಗಳನ್ನು ನಿಲ್ಲಿಸಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಪೋಲಿಸ್ ಇಲಾಖೆ ಎಚ್ಚರಿಕೆ ಕೊಡುವ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.