ರಸ್ತೆ ದುರಸ್ಥಿಗೆ ಒತ್ತಾಯ


(ಸಂಜೆವಾಣಿ ವಾರ್ತೆ)
ಬಳ್ಳಾರಿ 18 : ನಗರದ ಕನಕ ದುರ್ಗಮ್ಮ ದೇವಸ್ಥಾನದ ಹಿಂಭಾಗದಲ್ಲಿ ಮೋಕರಸ್ತೆಯ ದುರಸ್ಥಿ ಕಾರ್ಯ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದು.  ದೂಳು ಮತ್ತು ಗುಂಡಿಗಳಿಂದ ಕೂಡಿದೆ. 
ಸರಿಯಾದ ಸಮಯಕ್ಕೆ  ರಸ್ತೆಗೆ ನೀರು ಸಿಂಪಡಿಸದೆ ಕಾಂಟ್ರಾಕ್ಟ್ ಅವರು ಸರಿಯಾಗಿ ನಿರ್ವಹಣೆ ಮಾಡ್ತಾ ಇಲ್ಲ.  ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆ ಆಗಿದ್ದು ಹಾಗೂ  ಹಿರಿಯ ನಾಗರಿಕರು ಓಡಾಡುವಾಗ ಮತ್ತು ವಾಹನ ಚಲಾಯಿಸುವಾಗ  ಕೆಳಗೆ ಬೀಳುತ್ತಿದ್ದಾರೆ.  ಇದಕ್ಕಾಗಿ  ಸಂಬಂಧಪಟ್ಟ ಮಹಾನಗರ ಪಾಲಿಕೆಯ ಅಧಿಕಾರಿಗಳು. ಕೂಡಲೇ ರಸ್ತೆ ದುರಸ್ತಿವಮಾಡಬೇಕು ಅಲ್ಲಿಯವರೆಗೆ ರಸ್ತೆಗೆ ನೀರು ಸಿಂಪಡಿಸಲು ಕ್ರಮ ಕೈಗೊಳ್ಳಬೇಕೆಂದು ಜನತೆ ಒತ್ತಾಯ ಮಾಡಿದ್ದಾರೆ.

One attachment • Scanned by Gmail