ರಸ್ತೆ ದುರಸ್ಥಿಗೆ ಎಂಎಎಸ್ ಆಗ್ರಹ

ರಾಯಚೂರು, ನ.೦೨-ನಗರದ ಅಶೋಕ ಡಿಪೋ ವೃತ್ತದಿಂದ ಹಿಡಿದು ಖಾಸಬಾವಿ ಹಾಗೂ ಖಾಸಭಾವಿಯಿಂದ ಪಶ್ಚಿಮ ಪೊಲೀಸ್ ಠಾಣೆ ವರೆಗೆ ರಸ್ತೆ ಕಾಮಗಾರಿ ಕೈಗೆತ್ತಿಕೊಂಡು ರಸ್ತೆ ದುರಸ್ಥಿ ಮಾಡುವಂತೆ ಒತ್ತಾಯಿಸಿ ಮೂಲನಿವಾಸಿ ಅಂಬೇಡ್ಕರ್ ಸಂಘ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ನಗರದ ಅಶೋಕ ಡಿಪೋ ವೃತ್ತದಿಂದ ಖಾಸಬಾವಿ ವರೆಗೆ ರಸ್ತೆಯು ತೀರಾ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಂಚಾರಿಸಲು ತೊಂದರೆಯಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.
ಈ ರಸ್ತೆಗೆ ಪ್ರಸೂತಿ ಕೇಂದ್ರ ಇರುತ್ತದೆ. ಆಸ್ಪತ್ರೆಗೆ ಬರುವ ಗರ್ಭಿಣಿಯರು ಆಟೋದಲ್ಲಿ ಬರಬೇಕಾದರೆ ರಸ್ತೆಗೆ ತಗ್ಗುಗುಂಡಿಗಳು ಬಿದ್ದು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಆಟೋ ಅಥವಾ ಆಂಬುಲೆನ್ಸ್ ಗಳಲ್ಲಿ ಹೆರಿಗೆ ಆಗುವ ಸಂಭವ
ಜರುಗಿದೆ. ಖಾಸಬಾವಿದಿಂದ ಪಶ್ಚಿಮ ಪೊಲೀಸ್ ಠಾಣೆ ವರೆಗೆ ರಸ್ತೆ ಹದಗೆಟ್ಟಿರುತ್ತದೆ, ಅದರಲ್ಲಿ ತಗ್ಗುಗುಂಡಿಗಳು ಹೆಚ್ಚಾಗಿರುತ್ತವೆ, ತಿರುಗಾಡುವ ವಾಹನ ಸವಾರರಿಗೆ ತುಂಬಾ ತೊಂದರೆಯಾಗಿರುತ್ತದೆ. ಈ ರಸ್ತೆಗಳು ಸುಮಾರು ವರ್ಷಗಳಿಂದ ಹದೆಗಟ್ಟಿರುತ್ತದೆ ಎಂದು ಆರೋಪಿಸಿದರು.
ಸ್ಥಳಗಳನ್ನು ಪರಿಶೀಲಿಸಿ ಕೂಡಲೇ ರಸ್ತೆಗಳನ್ನು ದುರಸ್ಥಿ ಮಾಡಬೇಕು ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಂ. ಭರತ್ ಕುಮಾರ, ಪ್ರವೀಣ್, ವಿರೇಶ, ರಾಜು, ಸೇರಿದಂತೆ ಉಪಸ್ಥಿತರಿದ್ದರು.