ರಸ್ತೆ ದುರಸ್ತಿಗೊಳಿಸಲು ಒತ್ತಾಯ


(ಸಂಜೆವಾಣಿ ವಾರ್ತೆ)
ಚನ್ನಮ್ಮನ ಕಿತ್ತೂರ,ಜು.26: ಧಾರವಾಡ ಜಿಲ್ಲೆಯಾಧ್ಯಂತ ಅತಿ ಹೆಚ್ಚು ಮಳೆ ಸುರಿಯುತ್ತಿದ್ದು. ಸಮೀಪದ ಅಳ್ನಾವರ ಪಟ್ಟಣದಲ್ಲಿ ವಿಪರೀತ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಪಟ್ಟಣಕ್ಕೆ ಸೇರುವ ಗ್ರಾಮಗಳ ಹಾಗೂ ಪಟ್ಟಣದ ಬಹುತೇಕ ಎಲ್ಲ ರಸ್ತೆಗಳು ಹಾಳಾಗಿವೆ. ಕಾಶ್ಯಾನಟ್ಟಿಯಿಂದ ಅಳ್ನಾವರಕ್ಕೆ ಸೇರುವ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ದಿನನಿತ್ಯ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ವಿಶೇಷವಾಗಿ ಸಾರ್ವಜನಿಕರು. ಶಾಲಾ ಮಕ್ಕಳು, ವಾಹನ, ಬೈಕ್ ಸವಾರರು ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿ ಪ.ಪಂ. ಮಾಜಿ ಸದಸ್ಯ ಸುಧೀರ ಅಂಬಡಗಟ್ಟಿ ಹಾಗೂ ಅಳ್ನಾವರದ ಸೇಂಟ್ ತೇರೆಜಾ ಪಿಯು ಹಾಗೂ ಪಧವಿ ಪೂರ್ವ ಮಹಾವಿದ್ಯಾಲಯದ ಪ್ರಾಶುಂಪಾಲ ಡಾ//ಲೂಕಾಸ್ ಎಸ್. ಅವರು ಗುಂಡಿಗಳನ್ನು ಮುಚ್ಚುವಂತೆ ಸಂಭಂದಪಟ್ಟ ಅಧಿಕಾರಿಗಳ ಗಮನ ಸೆಳೆದಿದ್ದಾರೆ.
ಕಳೆದ ವರ್ಷ ಮಾಜಿ ಶಾಸಕ ದಿವಂಗತ ಸಿ.ಎಂ. ನಿಂಬಣ್ಣವರ ಅವರ ಅವಧಿಯಲ್ಲಿ 3 ಕೋಟಿ ಹಣ ಮಂಜೂರು ಮಾಡಿ ಗುತ್ತಿಗೆದಾರರನ್ನು ಗುರುತಿಸಿ ರಸ್ತೆ ಪೂಜೆ ಗೈದಿದ್ದರು. ಚುನಾವಣೆ ಹಿನ್ನೆಲೆಯಲ್ಲ್ತಿ ಕಾಮಗಾರಿ ಸ್ಥಗಿತಗೊಂಡಿತ್ತು. ಹೊಸ ಸರ್ಕಾರ ಬಂದು ಸುಮಾರು ದಿನ ಕಳೆದರು ಈ ರಸ್ತೆ ಗುಂಡಿ ಮುಚ್ಚಲು ಯಾವೊಬ್ಬ ಅಧಿಕಾರಿ ಮುಂದಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದ್ದಾರೆ ಸ್ಥಗಿತಗೊಂಡ ರಸ್ತೆ ಕಾಮಗಾರಿಯನ್ನು ಬೇಗನೇ ದುರಸ್ಥಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.