
ಕಲಬುರಗಿ:ಆ.3: ನಗರದ ಸುಲ್ತಾನಪೂರ ರಿಂಗ ರಸ್ತೆಯಿಂದ ಬಂಬು ಬಜಾರ ಮರಗಮ್ಮ ಗುಡಿಯ ವರೆಗೆ ಸಂಪೂರ್ಣ ರಸ್ತೆ ಕೆಟ್ಟು ಹೋಗಿದ್ದು ಕೂಡಲೇ ಸರಿಪಡಿಸಿ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಪಾಟೀಲ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಆಯುಕ್ತರಿಗೆ ಅವರಿಗೆ ಮನವಿ ಸಲ್ಲಿಸಿದರು.
ನಗರದ ಸುಲ್ತಾನಪೂರ ರಿಂಗ ರಸ್ತೆಯಿಂದ ಬಂಬು ಬಜಾರ ಮರಗಮ್ಮ ಗುಡಿಯ ವರೆಗೆ ಈಗಾಗಲೇ ಕೋಟ್ಯಾನುಗಟ್ಟಲೆ ಖರ್ಚು ಮಾಡಿ ಸಿ.ಸಿ. ರಸ್ತೆಯನ್ನಾಗಿ ನಿರ್ಮಾಣ ಮಾಡಿದ್ದು ಆದರೆ ಅದು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿ ಕಿತ್ತಿಕೊಂಡು ಹೋಗುತ್ತಿದ್ದು ಅಲ್ಲದೆ ಎರಡು ಬದಿಗೆ ಉತ್ತಮ ತೆರೆದ ನಾಲೆ ನಿರ್ಮಿಸದೆ ಹೆಚ್ಚಿನ ನೀರು ನಿಲ್ಲುವ ಹಾಗೆ ಮಾಡಿದು, ಸದರಿ ರಸ್ತೆಯ ಮೂಲಕ ಸುಮಾರು 30 ರಿಂದ 40 ಹಳ್ಳಿಗಳ ರೈತಾಪಿ ಜನರು ತಮ್ಮ ಜಮೀನಿನ ಸಲಕರಣೆ, ಬೀಜ, ದವಸಧಾನ್ಯಗಳು ತೆಗೆದುಕೊಂಡು ಹೋಗಲು ನಗರದ ಗಂಜ ಪ್ರದೇಶಕ್ಕೆ ಆಗಮಿಸುತ್ತಾರೆ. ಹಾಗೂ ಕೆ.ಎಸ್.ಆರ್.ಪಿ, ಕ್ವಾಟರ್ಸ್ ಮತ್ತು ಶಾಲೆ ಇದ್ದಿರುವುದರಿಂದ ಸಾವಿರಾರು ಮಕ್ಕಳು ಈ ರಸ್ತೆಯ ಮೂಲಕ ಹಾದು ಹೋಗಬೇಕಾಗಿರುತ್ತದೆ. ಆದರೆ ಸದರಿ ರಸ್ತೆಯ ಸಂಪೂರ್ಣವಾಗಿ ಹದಗೆಟ್ಟ ಪ್ರಯುಕ್ತ ಅವರ ಸಂಚಾರಕ್ಕೆ ಹಾಗೂ ಕಲಬುರಗಿ ನಗರದ ಸಾರ್ವಜನಿಕರ ಸಂಚಾರಕ್ಕೂ ತುಂಬಾ ತೊಂದರೆ ಉಂಟಾಗಿ, ದೊಡ್ಡ ದೊಡ್ಡ ತಗ್ಗು ದಿನ್ನೆಗಳು ಬಿದ್ದು, ಹೆಚ್ಚಿನ ಟ್ರಾಫೀಕ್ ಜಾಮ್ ಆಗುತ್ತಿದ್ದು ಹೀಗಾಗಿ ಸದರಿ ರಸ್ತೆ ಉತ್ತಮ ರಸ್ತೆಯನ್ನಾಗಿ ನಿರ್ಮಿಸುವುದು ತುಂಬಾ ಅವಶ್ಯಕವಾಗಿರುತ್ತದೆ.
ಕಾರಣ ಮೇಲೆ ತಿಳಿಸಿದ ರಸ್ತೆಯು ಉತ್ತಮ ರಸ್ತೆಯನ್ನಾಗಿ ನಿರ್ಮಾಣ ಮಾಡಲು ಕೂಡಲೇ ಕ್ರಮ ಕೈಕೊಳ್ಳಬೇಕೆಂದು ತಾವು ಸ್ವತ: ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿ ಅವಲೋಕಿಸಿ ಅತೀ ಶೀಘ್ರದಲ್ಲಿ ಸದರಿ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ಈ ಕಾರ್ಯ (15) ದಿವಸದೊಳಗಾಗಿ ಕೈಕೊಳ್ಳಬೇಕು ಒಂದು ವೇಳೆ ಕ್ರಮ ಕೈಕೊಳ್ಳದೆ ಹೋದಲ್ಲಿ ನಮ್ಮ ಸಂಘದ ಪರವಾಗಿ ಸಾರ್ವಜನಿಕರು ಒಳಗೊಂಡಂತೆ ಉಗ್ರ ರೂಪದ ಹೋರಾಟ ನಡೆಸಬೇಕಾಗುತ್ತದೆಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಉಪಾಧ್ಯಕ್ಷ ಸಿದ್ದಾರಾಮ ಪಾಟೀಲ್, ಮುಖಂಡರಾದ ಶಾಂತಕುಮಾರ ಬಿರಾದಾರ, ಚಂದ್ರಕಾಂತ ಬಿರಾದಾರ, ಶರಣಬಸಪ್ಪ ಪಾಟೀಲ, ಶರಣಬಸಪ್ಪ ವಾಲಿ, ವಿಠಲ ಕೆರಮಗಿ, ಬಸವರಾಜ ಸಂಗೋಳಗಿ, ಶಿವಶರಣಪ್ಪ ಹತಗುಂದಿ ಇದ್ದರು.