ರಸ್ತೆ ದುರಸ್ತಿಗೆ ಆಗ್ರಹ


ಶಿರಹಟ್ಟಿ,ನ.17: ತಾಲೂಕಿನಾದ್ಯಾಂತ ಪ್ರಸಕ್ತ ಸಾಲಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ರಸ್ತೆಗಳೆಲ್ಲಾ ಸಂಪೂರ್ಣ ಹದಗೆÀಟ್ಟು ಹೋಗಿದ್ದು, ರಸ್ತೆ ತುಂಬೆಲ್ಲಾ ತಗ್ಗು ಗುಂಡಿಗಳು ಬಿದ್ದಿದ್ದರಿಂದ, ಕೆಲವು ದ್ವೀಚಕ್ರ ವಾಹನ ಸವಾರರು ಅಪಘಾತವಾಗಿ ಆಸ್ಪತ್ರೆಗೆ ಸೇರಿದ ಉದಾಹರಣೆಗಳಿವೆ ಕೂಡಲೇ ಕ್ಷೇತ್ರದ ತುಂಬೆಲ್ಲಾ ಹದಗೆಟ್ಟ ರಸ್ತೆಗಳನ್ನು ಸರಿಪಡಿಸಬೇಕು ಎಂದು ಶಿರಹಟ್ಟಿ ತಾಲೂಕ ಎಸ್. ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ಮುತ್ತುರಾಜ ಭಾವಿಮನಿ ಆಗ್ರಹಿಸಿದಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದಾದ್ಯಂತ ವಿಪರೀತ ಮಳೆಯಿಂದ ರಸ್ತೆಗಳು ಹಾಳಾಗಿರುವ ಹಿನ್ನೆಲೆ ಇದುವರೆಗೂ ಸ್ಥಳೀಯ ಶಾಸಕ ರಾಮಪ್ಪ ಲಮಾಣಿಯವರು ಇತ್ತ ಕಡೆ ಗಮನ ಹರಿಸದೇ ಇದ್ದಿದ್ದು ವಿಪರ್ಯಾಸದ ಸಂಗತಿ. ಶಾಸಕರ ಬೇಜವ್ದಾರಿಯಿಂದ ಕ್ಷೇತ್ರದ ರಸ್ತೆಗಳ ಅಭಿವೃದ್ದಿಗೆ ವಿಳಂಬವಾಗಿದ್ದಕ್ಕೆ ಇವರೇ ನೇರ ಹೊಣೆ ಎಂದವರು ಹೇಳಿದ್ದಾರೆ.
ಶಿರಹಟ್ಟಿ ಕ್ಷೇತ್ರದಾದ್ಯಂತ ಹದಗೆಟ್ಟ ರಸ್ತೆಗಳನ್ನು ಒಂದು ವಾರದಲ್ಲಿ ಸರಿಪಡಿಸದೇ ಹೋದಲ್ಲಿ ಶಾಸಕರ ನಿವಾಸದ ಮುಂದೆ ಧರಣಿ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.