ರಸ್ತೆ ದುರಸ್ತಿಗೆ ಆಗ್ರಹ

ಆನೇಕಲ್,ಫೆ.೧೨- ಚೂಡಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಸರ್ಕಾರ ಕೂಡಲೇ ಸರಿಪಡಿಸಿ ಕೊಡಬೇಕು ಇಲ್ಲವಾದಲ್ಲಿ ಚೂಡಹಳ್ಳಿ ಗ್ರಾಮಸ್ಥರೆಲ್ಲಾ ಸಾಮೂಹಿಕವಾಗಿ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಡಾ|| ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ರಾಜ್ಯಾದ್ಯಕ್ಷ ಡಾ|| ಮರಸೂರು ಕೃಷ್ಣಪ್ಪರವರು.
ಅವರು ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂಡಹಳ್ಳಿ ಗ್ರಾಮದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಯುವಕರ ಸಂಘ, ಬಾರತೀಯ ಬೀಮ ಸೇನೆ, ಕನ್ನಡಾಂಬೆ ರಕ್ಷಣ ವೇದಿಕೆ ಸಿಂಹ ಘರ್ಜನೆ ಮತ್ತು ಕರ್ನಾಟಕ ಬೀಮ ಸೇನೆಯ ನೂತನ ಶಾಖೆಗೆ ಚಾಲನೆ ನೀಡಿ ಮಾತನಾಡಿದರು. ಚೂಡಹಳ್ಳಿ ಗ್ರಾಮ ಬನ್ನೇರುಘಟ್ಟ ಅರಣ್ಯ ವಲಯಕ್ಕೆ ಹೊಂದಿಕೊಂಡಿದ್ದು ಕಳೆದ ಹತ್ತಾರು ವರ್ಷಗಳಿಂದ ಚೂಡಹಳ್ಳಿ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲದೆ ಜನರು ಸಾಕಷ್ಠು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ, ಜೊತೆಗೆ ಜನರಿಂದ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳು ಕೂಡ ಇತ್ತ ಮುಖ ಮಾಡಿಲ್ಲ ಎಂದು ಆರೋಪ ವ್ಯಕ್ತ ಪಡಿಸಿದರು.
ಲೋಕಸಭೆ ಚುನಾವಣೆ ಸಮೀಪವಾಗುತ್ತಿದೆ ಸರ್ಕಾರ ಕೂಡಲೇ ರಸ್ತೆಯನ್ನು ಸರಿಪಡಿಸಿಕೊಡದಿದ್ದರೆ ಈ ಬಾರಿ ಚೂಡಹಳ್ಳಿ ಗ್ರಾಮಸ್ಥರು ಲೋಕಸಭೆ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕರಿಸಲಾಗುವುದು ಎಂದು ತಿಳಿಸಿದರು. ಸರ್ಕಾರ ರಸ್ತೆ ಪಡಿಸಿಕೊಳ್ಳಲು ಹಣ ಇಲ್ಲ ಎಂದು ಹೇಳಲಿ, ನಾವೇ ಹಲವು ಸಂಘಗಳೆಗಳ ಸಹಯೋಗದಲ್ಲಿ ಚೂಡಹಳ್ಳಿ ಗ್ರಾಮಕ್ಕೆ ರಸ್ತೆಯನ್ನು ಸರಿಪಡಿಸಿಕೊಡುತ್ತೇವೆ ಎಂದು ತಿಳಿಸಿದರು. ಇದೇ ಸಂಧರ್ಭದಲ್ಲಿ ಶಾಲಾ ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ಚಿಮ್ಮಿದ ರಕ್ತ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬಾರತೀಯ ಬೀಮ ಸೇನೆಯ ಶಂಕರ್ ರಾಮಲಿಂಗಯ್ಯ. ಡಾ|| ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ಮಹಿಳಾ ಅಧ್ಯಕ್ಷೆ ಬೊಮ್ಮಸಂದ್ರ ರೇಣುಕಾ, ಕನ್ನಡಾಂಬೆ ರಕ್ಷಣ ವೇದಿಕೆ ಸಿಂಹ ಘರ್ಜನೆಯ ಅಧ್ಯಕ್ಷೆ ಕೀರ್ತನಾ ಮಂಜುನಾಥ್, ಹೋರಾಟಗಾರರಾದ ಮಂಜುನಾಥ್, ಚೂಡಹಳ್ಳಿ ಕಾಳಯ್ಯ, ವಿನೋದ, ಸುರೇಶ್, ಹೆಚ್.ವಿ. ಮಂಜುನಾಥ್, ಆನಂದ್ ಬಾಗವಹಿಸಿದ್ದರು.