ರಸ್ತೆ ದುರಸ್ತಿಗೆ ಆಗ್ರಹ

ಕಾಳಗಿ.ಜು.27. ತಾಲೂಕಿನ ತೆಂಗಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯೂ ತೆಂಗಳಿ ಕ್ರಾಸ್ ನಿಂದ ಯಲ್ಲಮ್ಮದೇವಸ್ಥಾನ ವರೆಗೆ ಡಾಂಬರಿಕರಣವಾಗಿದ್ದು. ದೇವಸ್ಥಾನದಿಂದ ತೆಂಗಳಿ ಗ್ರಾಮದ ವರೆಗಿನ ರಸ್ತೆಯು ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದು ಕೆಸರು ಗದ್ದೆಯಂತಾಗಿದೆ. ಬೈಕ್ ಸಾವರರು ಸ್ಕಿಡ್ ಆಗಿ ಬೀಳುವ ಭಯದಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು. ಕಾಳಗಿ ಪಟ್ಟಣ ಸೇರಿದಂತೆ ಹಲವಾರು ಗ್ರಾಮಗಳಿಂದ ಚಿತ್ತಾಪುರ ಪಟ್ಟಣದ ತಹಸೀಲ್ ಕಚೇರಿ, ಕೋರ್ಟ್ ಸೇರಿ ಹಲವಾರು ಸರ್ಕಾರಿ ಕಚೇರಿಗಳಿಗೆ ಓಡಾಡುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲವೆಂದು ತೆಂಗಳಿ ವಲಯ ಕರವೇ ಅಧ್ಯಕ್ಷ ರೌಫ್ ಆಫಖಾನ ಆರೋಪಿಸಿದ್ದಾರೆ.