ರಸ್ತೆ ದಾಟಲು ಜನರ ಹರ ಸಾಹಸ ಫ್ಲೈ ಓವರ್ ನಿರ್ಮಾಣಕ್ಕೆ ಮನವಿ

ಚಿತ್ರದುರ್ಗ. ನ.೧೬; ದಿನನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು, ಮಹಿಳೆಯರು, ಮಕ್ಕಳು ವೃದ್ಧರು ಬಸವೇಶ್ವರ ಆಸ್ಪತ್ರೆ ಮುಂಭಾಗದಲ್ಲಿರುವ ಹೈವೇ ದಾಟಲು, ಹರ ಸಾಹಸ ಪಡುತ್ತಿರುವ ದೃಶ್ಯ ದಿನವೂ ನೋಡಲು ಸಿಗುತ್ತಿದೆ. ಯಾರಾದರೂ ಹೆಚ್ಚು ಕಡಿಮೆ ಮಾಡಿಕೊಂಡರೇ, ರಸ್ತೆದಾಡುವುದನ್ನು ನಿಧಾನ ಮಾಡಿದರೆ, ರಸ್ತೆ ಅಪಘಾತಗಳಾಗಿ ಪ್ರಾಣ ಕಳೆದುಕೊಳ್ಳುವ ಸಂಭವವಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷರಾದ ಡಾ ಎಚ್ ಕೆ ಎಸ್ ಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ .ರಾಷ್ಟಿçÃಯ ಹೆದ್ದಾರಿ ನಿಗಮದವರು, ನಗರಾಡಳಿತದವರು, ಜನಸಾಮಾನ್ಯರಿಗೆ ರಸ್ತೆ ದಾಟಲು ಸುರಕ್ಷಿತವಾದ ಫ್ಲೆöÊ ಓವರ್ ನಿರ್ಮಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ. ರಸ್ತೆ ನಿರ್ಮಾಣವಾದಾಗಿನಿಂದ ಬಹಳ ವರ್ಷಗಳಿಂದ ಇಲ್ಲಿ ಬಹಳಷ್ಟು ಅಪಘಾತಗಳಾಗಿ, ಜನರು ಪ್ರಾಣ ಕಳೆದುಕೊಂಡಿರುವAತಹ ಇತಿಹಾಸವಿದೆ. ಹಾಗಾಗಿ ಈಗ ಹೊಸ ಹೈವೇ ನಗರದ ಹೊರ ಭಾಗದಲ್ಲಿ ಹೋಗಿದ್ದರು ಸಹ, ಇಲ್ಲಿ ಒಳ ಸಂಚರಿಸುವ ವಾಹನಗಳಿಂದ ರಸ್ತೆ ಅಪಘಾತಗಳಾಗಿ, ಜನರು ಪ್ರಾಣ ಕಳೆದುಕೊಳ್ಳುವ ಸಂಭವವಿದೆ. ಮುಂದಾದರೂ ಒಂದು ದಿವಸ ರಸ್ತೆದಾಟಲು ಫ್ಲೆöÊಓವರ್ ನಿರ್ಮಿಸುವ ಅವಶ್ಯಕತೆ ಹೆಚ್ಚಾಗುತ್ತದೆ. ಹಾಗಾಗಿ ಈಗಲೇ ಫ್ಲೆöÊಓವರ್ ನಿರ್ಮಿಸಿದರೆ ಜನರ ಪ್ರಾಣವಾದರೂ ಉಳಿಸಿಕೊಳ್ಳಬಹುದು ಎಂದಿದ್ದಾರೆ.ಆಸ್ಪತ್ರೆಯಲ್ಲಿ ರೋಗಿಗಳನ್ನ ನೋಡಲು ಬರುವಂತಹ ಸಂಬAಧಿಕರು, ಆಸ್ಪತ್ರೆಯಲ್ಲಿ ಕೆಲಸ ಮಾಡುವಂತಹ ನೌಕರರು, ನರ್ಸಿಂಗ್ ವಿದ್ಯಾರ್ಥಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು, ದಿನಕ್ಕೆ ನಾಲ್ಕೆöÊದು ಬಾರಿ ರಸ್ತೆಯನ್ನು ದಾಟುತ್ತಿರುತ್ತಾರೆ, ಹಾಗಾಗಿ ಇವರ ಸುರಕ್ಷತೆಗಾದರೂ ಫ್ಲೆöÊ ಓವರ್ ನಿರ್ಮಿಸಿ ಕೊಟ್ಟಷ್ಟು ಅನುಕೂಲಕರವಾಗುವುದು. ನಡೆದಾಡಿಕೊಂಡು ಓಡಾಡುವವರಿಗೆ ದೂರದಲ್ಲಿ ಅಂಡರ್ ಪಾಸ್ ನೀಡಿದರು ಸಹ, ಜನರಿಗೆ ಅದನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಮಾನವ ಶಕ್ತಿಯನ್ನು ಬಳಸಿ ನಡೆದಾಡುವಂಥವರಿಗೆ ಹತ್ತಿರದಲ್ಲೇ ಒಂದು ಫ್ಲೆöÊ ಓವರ್ ನಿರ್ಮಿಸಿ ಕೊಟ್ಟಷ್ಟು ಅನುಕೂಲಕರ ಎಂದು ತಿಳಿಸಿದ್ದಾರೆ.