ರಸ್ತೆ ತಡೆ ಕೈ ಬಿಟ್ಟು ಕಾಲುವೆ ಮೇಲೆ ನೀರಿಗಾಗಿ ಠಿಕಾಣಿ ಹೂಡಿದ ರೈತರು


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.03: ತಾಲೂಕಿನ ತೆಕ್ಕಲಕೋಟೆ, ಉಪ್ಪರ ಹೋಸಳ್ಳಿ, ದೇವಿ ನಗರ, ಬಲುಕುಂದಿ, ಬಂಗಾರ ರಾಜ್ಯ ಕ್ಯಾಂಪ್ ಇತರೆ ಗ್ರಾಮಗಳ ರೈತರು ಇಂದು ಕರೆ ಕೊಟ್ಟಿದ್ದ ರಾಷ್ಟ್ರೀಯ ಹೆದ್ದಾರಿ ತಡೆಯನ್ನು ನಿಲ್ಲಿಸಿ ಎಲ್.ಎಲ್.ಸಿ ಕಾಲುವೆಯ ಜಿರೋ ಗೇಟ್ ನ ಹತ್ತಿರ ರೈತರು ನೀರಿಗಾಗಿ ಠಿಕಾಣಿ ಹೂಡಿದ್ದಾರೆ.
ನಿನ್ನೆ ಸಂಜೆ‌ ಸಿ.ಪಿ.ಐ ಸುಂದರೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಸ್ತೆ ತಡೆ ಹಿಂಪಡೆಯುವಂತೆ ಮನ ಒಲಿಸಲಾಯಿತು,
ಇಂದು ಮತ್ತೆ ಸಭೆ ಸೇರಿದ ರೈತರು ತಮ್ಮ ಬೆಳೆಗಳಿಗೆ ನೀರು ಬಿಡುವಂತೆ ತುಂಗಭದ್ರಾ ಕಾಲುವೆಯ (ಬಾಗೇವಾಡಿ)  ಜಿರೋ ಪಾಯಿಂಟ್ ಹತ್ತಿರ ಠಿಕಾಣಿ ಹೂಡಿ ನೀರು ಬಿಡುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಸಿ.ಪಿ.ಐ ಸುಂದರೇಶ್ ಸಿ.ಎಚ್ , ಎ.ಇ.ಇ ಮಂಜುನಾಥ. ಎ.ಇ ತಿಪ್ಪೇಸ್ವಾಮಿ, ಸಿರಿಗೇರಿಯ ಪಿ ಎಸ್ ಐ ವೆಂಕಟೇಶ ನಾಯಕ, ರೈತರ ಮನವೊಲಿಸಿ 150 ಕ್ಯೂಸೆಕ್ಸ್ ನೀರು ಬಿಡುವುದಾಗಿ ಆಶ್ವಾಸನೆ ನೀಡಿ ಕಾಲುವೆಗೆ ನೀರು ಬಿಡಿಸಿದರು.
ಎ.ಇ.ಇ ಸುರೇಶ್ ಪೂಜಾರಿ, ರೈತ ಮುಖಂಡ ಮಲ್ಲಿಕಾರ್ಜುನ, ಜ್ಞಾನ ನಂದಸ್ವಾಮಿ, ಕೊಮರೆಪ್ಪ, ಮಾರುತಿ, ಮಾಬುಸುಬಾನಿ, ಉಪ್ಪಾರ ನಾಗೇಂದ್ರ, ರಾಜಪ್ಪ, ಜಿ.ಮಲ್ಲಿಕಾರ್ಜುನ, ಮಹಂತಯ್ಯ ಸ್ವಾಮಿ, ಮಂಜು, ಉಸ್ಮಾನ್ ಹಾಗೂ ಇತರೆ ಗ್ರಾಮದ ಎಲ್ಲಾ ರೈತರು ಇದ್ದರು.