
ಕಲಬುರಗಿ,ಮಾ.2-ನಗರದ ವಾರ್ಡ್ ನಂ.41ರಲ್ಲಿ ಬರುವ ಮಿಸ್ಬಾ ನಗರ, ಜಿದ್ದಾ ಕಾಲೋನಿಯ ಎಲ್ಲಾ ರಸ್ತೆಗಳನ್ನು ಡಾಂಬರೀಕರಣ ಮಾಡಬೇಕು ಎಂದು ಬಡಾವಣೆಯ ನಾಗರೀಕರು ಒತ್ತಾಯಿಸಿದ್ದಾರೆ.
ಈ ಸಂಬಂಧ ಬಡಾವಣೆಯ ಪ್ರಮುಖರಾದ ಮಹ್ಮದ್ ಶರ್ಫುದ್ದೀನ್, ಎಂ.ಡಿ.ಖಾಲೀದ್, ಶೇಖ್ ಮಹಿಬೂಬ್, ನಸೀರೊದ್ದಿನ್, ಬಾಬು ಮಿಯಾನ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ ಕೂಡಲೇ ಈ ಕಾಲೋನಿಯ ರಸ್ತೆ ಡಾಂಬರೀಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಐದು ತಿಂಗಳ ಹಿಂದೆ ಉತ್ತರ ಮತಕ್ಷೇತ್ರದ ಶಾಸಕರಾದ ಕನೀಜ್ ಫಾತಿಮಾ ಅವರು ರಸ್ತೆ ಡಾಂಬರೀಕರಣ ಕಾಮಗಾರಿ ಉದ್ಘಾಟನೆ ಮಾಡಿ ಹೋಗಿದ್ದಾರೆ. ಆದರೆ, ಇಲ್ಲಿಯವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿ ಪ್ರಾರಂಭವಾಗಿಲ್ಲ. ಇದರಿಂದ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ರಸ್ತೆ ಡಾಂಬರೀಕರಣ ಕಾಮಗಾರಿ ಪ್ರಾರಂಭಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.