ರಸ್ತೆ, ಚರಂಡಿ ಕಾಮಗಾರಿ ಬಿಲ್ಲ ತಡೆಹಿಡಿಯಲು ಒತ್ತಾಯ

ಇಂಡಿ:ಮಾ.26: ಪುರಸಭೆ ಠರಾವಿನಲ್ಲಿ ನಿಗದಿ ಮಾಡಿದಂತೆ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಸಹಾಯಕ ಕಾರ್ಯಪಾಲಕ ಅಭಿಯಂತರರು ಲೋಕೋಪಯೋಗಿ ಬಂದರು ಒಳನಾಳು ಜಲಸಾರಿಗೆ ಇಲಾಖೆ ಅಧಿಕಾರಿ ದಯಾನಂದ ಮಠ ಹಾಗೂ ಇಇ ಎಂ.ಎಂ ಸಂಜವಾಡ ಇವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿ.ಎಸ್.ಎನ್.ಎಲ್ ಕಚೇರಿ ಮುಂಭಾಗ ಹಾಗೂ ಬಸ್ ನಿಲ್ದಾಣದ ಬದಿಯಲ್ಲಿ ನಡೇದಿರುವ ಕಾಮಗಾರಿ ಚರಂಡಿ ,ರಸ್ತೆ ಪುರಸಭೆ ಠರಾವು ಅಂದಾಜು ಪತ್ರಿಕೆಯಂತೆ ಕಾಮಗಾರಿಗಳು ನಡೆದಿಲ್ಲ. ಬಸವೇಶ್ವರ ವೃತ್ತದಿಂದ ಸಿಂದಗಿ ರಸ್ತೆಯ ಶ್ರೀಶಾಂತೇಶ್ವರ ಮಂಗಲ ಕಾರ್ಯಾಲಯದವರೆಗೆ ರಸ್ತೆ ಕಾಮಗಾರಿ ನಡೆಯಬೇಕು. ಬಸ್ ನಿಲ್ದಾಣ, ಬಿಎಸ್ ಎನ್ ಎಲ್ ಕಚೇರಿ ಹತ್ತಿರ ಪುಟ್ ಪಾತ್ ರಸ್ತೆ ಅಗಲೀಕರಣ ಕಾಮಗಾರಿ ನಿಗದಿಪಡಿಸಿದಂತೆ ನಡೇದಿರುವುದಿಲ್ಲ ಬಸ್ ನಿಲ್ದಾಣ ,ಬಿ.ಎಸ್.ಎನ್.ಎಲ್‍ಹತ್ತಿರ ಚರಂಡಿ ,ರಸ್ತೆ ಮಾಡುವವರೆಗೂ ಗುತ್ತಿಗೆದಾರರಿಗೆ ಬಿಲ್ಲ ಮಾಡಕೂಡದು ಒಂದು ವೇಳೆ ಮಾಡಿದರೆ ಸಂಬಂಧಿಸಿದ ಇಲಾಖೆ ಮುಂದೆ ಧರಣಿ ಸತ್ಯಾಗ್ರ ಕುಳಿತು ಪುರಸಭೆ ಸದಸ್ಯರು ಹಾಗೂ ಪಟ್ಟಣದ ನಾಗರೀಕರೊಂದಿಗೆ ಉಗ್ರ ಹೋರಾಟ ಮಾಡಲಾಗುವದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಶ್ರೀಶೈಲ ಪೂಜಾರಿ, ಉಪಾಧ್ಯಕ್ಷ ಇಸ್ಮಾಯಿಲ್ ಅರಬ, ಭೀಮಾಶಂಕರ ಮೂರಮನ್ , ದೇವೆಂದ್ರ ಕುಂಬಾರ, ಮುಸ್ತಾಕ ಇಂಡಿಕರ್ , ವಿಜು ರಾಠೋಡ, ಸುಧೀರ ಕರಕಟ್ಟಿ ಉಪಸ್ಥರಿತರಿದ್ದರು.