ರಸ್ತೆ ಗುಂಡಿಗಳ ಮುಚ್ಚುವ ಕಾರ್ಯಕ್ಕೆ ಶೀಘ್ರ ಚಾಲನೆ

ದಾವಣಗೆರೆ.ನ.17; ನಗರ ವ್ತಾಪ್ತಿಯ ಲೋಕೋಪಯೋಗಿ ಇಲಾಖೆ ರಸ್ತೆಗಳ ಗುಂಡಿಗಳ ಮುಚ್ಚುವ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು ವಾರದೊಳಗೆ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜನಿಯರ್‌ ವಿಜಯ್‌ ಕುಮಾರ್‌  ತಿಳಿಸಿದ್ದಾರೆ ದಾವಣಗೆರೆ ಜಿಲ್ಲೆಯ ಚನ್ನಗಿರಿ,ಜಗಳೂರು,ಹರಿಹರ ,ಹೊನ್ನಾಳಿ ವ್ಯಾಪ್ತಿಯ ರಸ್ತೆಗಳ ಗುಂಡಿ ಹಾಗೂ ರಸ್ತೆಯಲ್ಲಿ ಇರುವ ಸಣ್ಣ ಸಣ್ಣ ತಗ್ಗುಗಳನ್ನು ಈಗಾಗಲೇ ಡಾಂಬಾರಿನಿಂದ ಮುಚ್ಚಲಾಗುತ್ತಿದೆ,ಅಲ್ಲದೇ ರಸ್ತೆ ಬದಿಯ ಅಗತ್ಯ ಇರುವ ಕಡೆ ಮಳೆ ನೀರು ಹರಿದು ಹೋಗಲು ದಾರಿ,ರಸ್ತೆ ಬದಿಯ ಮಣ್ಣು  ಸಹ ತೆರವು ಮಾಡಲಾಗುತ್ತಿದೆ ಎಂದು ತಿಳಿಸಿದರು,ಹರಿಹರ ನಗರ ವ್ಯಾಪ್ತಿ ಹಾಗೂ ಹರಿಹರ ದಿಂದ  ಹರಪನಹಳ್ಳಿ ರಸ್ತೆಯ ಗುಂಡಿಗಳನ್ನು ನಾಲ್ಕೈದು ದಿನಗಳಲ್ಲಿ ಮುಚ್ಚಲು ಪ್ರಾರಂಭಿಸುವುದಾಗಿ ತಿಳಿಸಿದರು , ತಮ್ಮ ಕಛೇರಿಗೆ   ಲೋಕೋಪಯೋಗಿ ಇಲಾಖೆ ರಸ್ತೆಗಳ ಗುಂಡಿ ಮುಚ್ಚುವ ಬಗ್ಗೆ ಮನವಿ ನೀಡಲು ಆಗಮಿಸಿದ ಸಾಮಾಜಿಕ ಕಾರ್ಯಕರ್ತ ಎಂ ಜಿ ಶ್ರೀಕಾಂತ ಅವರ ಸಮ್ಮುಖದಲ್ಲಿ ಇ ಇ ಅವರು ಸಂಬಂಧಪಟ್ಟ ತಾಲ್ಲೂಕಿನ ಎ ಇ ಇ ಅವರುಗಳಿಗೆ ಕರೆ ಮಾಡಿ ಗುಂಡಿ ಮುಚ್ಚುವ ಬಗ್ಗೆ ಮಾಹಿತಿ ಪಡೆದು ನೀಡಿದರು,ಸಾಮಾಜಿಕ ಕಾರ್ಯಕರ್ತ ದಾವಣಗೆರೆ ನಗರದ ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ನೀಡಿದರು,