ರಸ್ತೆ ಗುಂಡಿಗಳಿಗೆ ರಂಗೋಲಿ ಬಿಡಿಸಿ ಗಿಡ ನೆಟ್ಟು ಆಕ್ರೋಶ

ಮೈಸೂರು: ಸೆ.13:- ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿಗೆ ಒತ್ತಾಯಿಸಿ ಕೆ.ಆರ್.ಎಂ ಫೌಂಡೇಶನ್ ವತಿಯಿಂದ ಕುವೆಂಪುನಗರದ ನೃಪತುಂಗ ರಸ್ತೆಯಲ್ಲಿ ಗುಂಡಿಗಳಿಗೆ ರಂಗೋಲಿ ಬಿಡಿಸಿ ಹಾಗೂ ಗಿಡ ನೆಟ್ಟು ಅಣಕು ಪ್ರದರ್ಶನ ಮಾಡುವ ಮೂಲಕ ನಗರಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಯುವ ಮುಖಂಡ ಎನ್ ಎನ್ ನವೀನ್ ಕುಮಾರ್ ಮಾತನಾಡಿ, `ಮೈಸೂರಿನಲ್ಲಿ ರಸ್ತೆಯುದ್ದಕ್ಕೂ ಗುಂಡಿಮಯವಾಗಿದ್ದು, ವೃದ್ಧರು ರೋಗಿಗಳು ಸಂಚರಿಸುವುದು ಕಷ್ಟವಾಗಿದೆ.ಶಾಲಾ ಮಕ್ಕಳು, ಕಾರ್ಮಿಕರು, ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ.
ನಾಡಹಬ್ಬದ ಸಂದರ್ಭದಲ್ಲಿ ಮಾತ್ರ ಪ್ರಮುಖ ರಸ್ತೆಗಳು ಅಭಿವೃದ್ಧಿ ದಸರಾ ಮಹೋತ್ಸವದ ಸಂದರ್ಭದಲ್ಲಿ ನಗರದ ಪ್ರಮುಖ ರಸ್ತೆಗಳು ಮಾತ್ರ ಅಭಿವೃದ್ಧಿ ಕಾಣುತ್ತವೆ. ಆದರೆ, ಈ ಬಾರಿ ಎಲ್ಲ ಬಡಾವಣೆಗಳ ರಸ್ತೆಗಳೂ ಸಂಪೂರ್ಣ ಹದಗೆಟ್ಟಿದ್ದು, ನಗರಪಾಲಿಕೆ ಕೂಡಲೇ ಬಡಾವಣಿಗಳ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಸಂದರ್ಭ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಯಿತು. ಆ ರಸ್ತೆಗಳಲ್ಲಿ ಇದೀಗ ಹೊಂಡಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಹಾಗಾಗಿ, ಇನ್ನು ಮುಂದೆ ಕೈಗೊಳ್ಳುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲಿ, ಸುದೀರ್ಘ ಬಾಳಿಕೆ ಬರುವಂತಿರಬೇಕು.
ಪ್ರವಾಸಿಗರು ಇಲ್ಲಿನ ರಸ್ತೆಗಳನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ ,ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ನೆಪದಲ್ಲಿ ಒಂದೆರಡು ರಸ್ತೆಗಳು ಅಭಿವೃದ್ಧಿ ಕಂಡೆವು, ಆದರೆ ಉಳಿದೆಲ್ಲ ರಸ್ತೆಗಳು ಸಂಪೂರ್ಣ ದುಸ್ಥಿತಿಯಲ್ಲಿವೆ, ಪ್ರತಿ ವರ್ಷ ರಸ್ತೆಗಳು ದುಸ್ಥಿತಿಗೆ ತಲುಪಲು ಕಳಪೆ ಕಾಮಗಾರಿಯೇ ಕಾರಣ, ಕಮಿಷನ್ ಹಾವಳಿಯಿಂದ ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ, ದಸರಾ ಸಂದರ್ಭದಲ್ಲಿ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಲಿದ್ದು ಈ ಕೂಡಲೇ ಗುಣಮಟ್ಟದ ಕಾಮಗಾರಿ ಮೈಸೂರು ನಗರದ ಪ್ರತಿ ವಾರ್ಡ್ ನಲ್ಲೂ ಮಾಡಲು ಮುಂದಾಗಬೇಕು ಇಲ್ಲವಾದಲ್ಲಿ ನಗರಪಾಲಿಕೆ ಮುಂಭಾಗ ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ದಸರಾ ಉದ್ಘಾಟನೆಗೆ ಆಗಮಿಸಲಿರುವ ರಾಷ್ಟ್ರಪತಿಯನ್ನು ದಯಮಾಡಿ ಮೈಸೂರು ನಗರದ ರಸ್ತೆಗಳಲ್ಲಿ ಸಂಚರಿಸಲಿ ಆಗಲಾದರೂ ಮೈಸೂರಿನ ರಸ್ತೆಗಳನ್ನು ಅಭಿವೃದ್ಧಿ ಕಾಣಬಹುದು ಎಂಬ ನಿರೀಕ್ಷಿಸಬಹುದು.
ಮೈಸೂರು ನಗರದಲ್ಲಿ ಗುಂಡಿಗಳನ್ನು ಮುಚ್ಚಿದೆ ಹೋದರೆ ಮುಂದಿನ ದಿನಗಳಲ್ಲಿ ಎಲ್ಲಾ ಗುಂಡಿಗಳಲ್ಲೂ ಬಿಜೆಪಿ ಬಾವುಟ ಹಾಗೂ ಶಾಸಕರ ಭಾವಚಿತ್ರ ನೆಡುವ ಮೂಲಕ ಪ್ರತಿಭಟಿಸುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎನ್.ಎಂ ನವೀನ್ ಕುಮಾರ್, ವಿನಯ್ ಕಣಗಾಲ್, ರಾಜೇಶ್, ಕಿರಣ್, ಭರತ್ ಬಿ, ವಾಸುದೇವ್ ಮೂರ್ತಿ, ಮಲ್ಲೇಶ್, ಉಮೇಶ್, ರವಿ, ಕುಮಾರ್, ವಿಜಯ್, ಆನಂದ್ ಕುಮಾರ್ ಹಾಗೂ ಇನ್ನಿತರರು ಭಾಗಿಯಾಗಿದ್ದರು.