ಲಿಂಗಸುಗೂರು,ಜೂ.೧೬-
ತಾಲೂಕಿನ ೧೫೦ ಎ ರಾಷ್ಟ್ರೀಯ ಹೆದ್ದಾರಿ ಜೇವರ್ಗಿ ಣo ಚಾಮರಾಜನಗರ ರಸ್ತೆ ಅಗಲೀಕರಣದಲ್ಲಿ ರೈತರಿಗೆ ಯಾವುದೇ ಸೂಚನೆ, ಮಾಹಿತಿ ನೀಡದೇ ರಸ್ತೆ ಕಾಮಗಾರಿ ಮಾಡುತ್ತಿರುವದನ್ನು ವಿರೋಧಿಸಿ ಇಂದು ಏಖS ಪಕ್ಷದ ರಾಯಚೂರು ಜಿಲ್ಲಾ ಘಟಕ, ಲಿಂಗಸೂರು ಹಾಗೂ ಮಸ್ಕಿ ತಾಲೂಕು ವತಿಯಿಂದ ಹೋರಾಟ.ನಡೆಸಿ ಸಂತೆಕಲ್ಲೂರ್ ಗ್ರಾಮದ ರೈತರಿಗೆ ಬೆಂಬಲ ಸೂಚಿಸಿದರು.
ಲಿಂಗಸಗೂರು ಮಸ್ಕಿ ಮುಖ್ಯರಸ್ತೆಯಲ್ಲಿ ಬರುವ ರೈತರ ಜಮೀನುಗಳಿಗೆ ಪರಿಹಾರ ನೀಡಬೇಕು ಎಂದು ಕೆಆರ್‌ಎಸ್ ಪಕ್ಷದಿಂದ ಲಿಂಗಸುಗೂರು ಉಪ ವಿಭಾಗಾಧಿಕಾರಿ ಸಾಹಾಯಕ ಆಯುಕ್ತರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಅಧ್ಯಕ್ಷ ನಿರುಪಾದಿಕ ಕೆ ಗೋಮರ್ಷಿ, ಜಿಲ್ಲಾ ಗೌರವಅಧ್ಯಕ್ಷ ಆದಪ್ಪ ಅಂಕುಶದೊಡ್ಡಿ, ಮಸ್ಕಿ ಮಹಿಳಾ ಘಟಕದ ಅಧ್ಯಕ್ಷ ಗಂಗಮ್ಮ, ಲಿಂಗಸುಗೂರು ತಾಲೂಕ ಅಧ್ಯಕ್ಷ ವಿಶ್ವನಾಥ್ ನಾಯ್ಡು, ಕೆಆಎಸ್ ಪಕ್ಷದ ಸೈನಿಕ ವಿಜಯಕುಮಾರ್ ಪೋಳ್ ಹಾಗೂ ರೈತರು ಮತ್ತು ಇನ್ನಿತರ ಸಂಘಟನೆಗಳು ಹಾಜರಿದ್ದರು.