ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ

ಶ್ರೀನಿವಾಸಪುರ,ನ,೧೬-ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಒಂದಾದ ಪೋಸ್ಟಾಫಿಸ್ ರಸ್ತೆ, ಜೆ.ಸಿ.ರಸ್ತೆ ಕಾಮಗಾರಿ ಕಳೆದ ೭-೯ ತಿಂಗಳಿನಿಂದ ಪೂರ್ಣಗೊಳಿಸದೆ ನಿರ್ಲಕ್ಷಿಸಿರುವ ಪರಿಣಾಮ ರಸ್ತೆಯಲ್ಲಿ ಧೂಳು ಏಳುತ್ತಿದೆ. ಒಡಾಡಲು ಕಷ್ಟವಾಗುತ್ತಿದ್ದು ಈ ತಕ್ಷಣ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ನೇತೃತ್ವದಲ್ಲಿ ಆಟೋಚಾಲಕರು, ಅಂಗಡಿ ಮಾಲೀಕರು ತಹಶೀಲ್ದಾರ್ ಕಚೇರಿ ಮುಂಬಾಗದಲ್ಲಿ ಧರಣಿ ನಡೆಸಿ ಪ್ರತಿಭಟಿಸಲಾಯಿತು.
ವೇದಿಕೆ ಅಧ್ಯಕ್ಷ ಸುಬ್ರಮಣಿ ಮಾತನಾಡಿ, ರಸ್ತೆ ಮಾಡಲು ಡಾಂಬರನ್ನು ಅಗೆದು ಹಾಗಿದ್ದಾರೆ, ಈಗ ಜೆಲ್ಲಿ ಮಿಶ್ರಿತ ಮಣ್ಣಿನ ರಸ್ತೆ ಇದ್ದು ಜನರು ಓಡಾಡಲು ಸಾಧ್ಯವಾಗದಷ್ಟು ಸಂಕಷ್ಟ ಪರಿಸ್ಥಿತಿ ಇದೆ ವಾಹನಗಳು ಓಡಾಡಿದರೆ ಮನುಷ್ಯ ಕಾಣದಷ್ಟು ದಟ್ಟವಾದ ಧೂಳು ಏಳುತ್ತದೆ ಇದರಿಂದಾಗಿ ಇಲ್ಲಿನ ಅಂಗಡಿ ಮಾಲಿಕರು ಕಫಾ ದಂತ ಅಲರ್ಜಿಕ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳು ಹಾಗು ಗುತ್ತಿಗೆದಾರರು ವಿಳಂಬ ಧೋರಣೆ ಅನುಸರಿಸುತ್ತ ಜೆಸಿ ರಸ್ತೆ ಕಾಮಗಾರಿ ನಿರ್ಲಕ್ಷ್ಯಸಿದ್ದಾರೆ, ಈ ಬಗ್ಗೆ ತಾಲೂಕು ಆಡಳಿತ ಮದ್ಯಪ್ರವೇಶ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸುವಂತೆ ಅಗ್ರಹಿಸಿ ತಾಲೂಕು ತಹಸೀಲ್ದಾರ್ ಶೀರಿನ್ ತಾಜ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನಾ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ ಸ್ಥಳಕ್ಕೆ ಆಗಮಿಸಿ ೨೫ ಗಡುವಿನ ಅಂತರದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ವಾಪಸ್ಸು ಪಡೆಯಲಾಯಿತು.
ಪ್ರತಿಭಟನೆಯಲ್ಲಿ ಪುರಸಭೆ ಮಾಜಿ ಸದಸ್ಯ ರಾಮಾಂಜಿ, ಹೋಳೂರು ಸಂತೋಷ್, ಸುನೀಲ್, ವಾಸವಿ ಸೀತಾರಾಮ್, ಕೊಪ್ಪರಮ್ ಮಂಜು ಇದ್ದರು.